Saturday, May 4, 2024
spot_imgspot_img
spot_imgspot_img

ಜನಪ್ರಿಯ ಪ್ರವಾಸಿ ತಾಣದಲ್ಲಿ ಭೀಕರ ದುರಂತ; ಬಂಡೆ ಕುಸಿದು ಬಿದ್ದು 10 ಮಂದಿ ದುರ್ಮರಣ

- Advertisement -G L Acharya panikkar
- Advertisement -
vtv vitla

ಬ್ರೆಸಿಲಿಯಾ: ಜಲಪಾತವೊಂದರ ಬಳಿ ಭಾರೀ ಗಾತ್ರದ ಗುಡ್ಡ ಜರಿದು ದೋಣಿಗಳಲ್ಲಿ ಬಂದಿದ್ದ ಪ್ರವಾಸಿಗರಲ್ಲಿ 10 ಮಂದಿ ಸಾವನ್ನಪಿದ ಘಟನೆ ನಡೆದಿದೆ. ಬ್ರೆಜಿಲ್‌ನ ಮಿನಾಸ್ ಗೈಸ್ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಪಿಟೋಲಿಯೋ ಕಣಿವೆಯಲ್ಲಿ ನಡೆದಿದೆ. ದುರಂತದಲ್ಲಿ 9 ಮಂದಿಗೆ ತೀವ್ರವಾದ ಗಾಯಗಳಾಗಿವೆ.

ಜಲಪಾತದ ಸರೋವರದ ಕಡೆ ಹಲವು ದೋಣಿಗಳಲ್ಲಿ ಪ್ರವಾಸಿಗರು ಹೋಗಿದ್ದರು. ಈ ಸಂದರ್ಭದಲ್ಲಿ ಜಲಪಾತದ ಕಲ್ಲಿನ ಒಂದು ಭಾಗ ಮುರಿದು ಎರಡು ದೋಣಿಗಳ ಮೇಲೆ ಅಪ್ಪಳಿಸಿದೆ. ಪರಿಣಾಮ ಎರಡು ದೋಣಿಗಳಲ್ಲಿದ್ದ 10 ಜನರು ಮೃತಪಟ್ಟಿದ್ದಾರೆ. ಇನ್ನೂ ನೀರಿನಲ್ಲಿ ಕಾಣೆಯಾಗಿರುವ ಇಬ್ಬರ ಹುಡುಕಾಟ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

23 ಮಂದಿ ಇತರ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಭಾರೀ ಗಾತ್ರದ ಕಲ್ಲಿನ ಭಾಗ ಮುರಿದು ಬೀಳುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡುತ್ತಿವೆ. ಕಳೆದ ಎರಡು ವಾರಗಳಿಂದ ಭಾರೀ ಮಳೆಯಾಗಿದ್ದು, ಬಂಡೆ ಕಲ್ಲು ಜರಿಯಲು ಮೂಲ ಕಾರಣ ಇದೇ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

- Advertisement -

Related news

error: Content is protected !!