Saturday, April 27, 2024
spot_imgspot_img
spot_imgspot_img

ಆರ್​ಆರ್​ ನಗರ ಉಪಚುನಾವಣೆಯಲ್ಲಿ ಗೆದ್ದ ತಕ್ಷಣವೇ ಮುನಿರತ್ನಗೆ ಸಚಿವ ಸ್ಥಾನ: ಬಿಎಸ್​ವೈ

- Advertisement -G L Acharya panikkar
- Advertisement -

ಬೆಂಗಳೂರು,ಅ31: ರಾಜರಾಜೇಶ್ವರಿ ಉಪಚುನಾವಣೆಯಲ್ಲಿ ಮುನಿರತ್ನ ಗೆದ್ದ ತಕ್ಷಣವೇ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಉಪಚುನಾವಣೆ ಮುಗಿದ ಮೇಲೆ ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಮಾತನಾಡಲು ದೆಹಲಿಗೆ ತೆರಳಲಿದ್ದೇನೆ. ಶಿರಾ ಮತ್ತು ಆರ್​ಆರ್​ ನಗರ ಎರಡರಲ್ಲೂ ನಮಗೆ ಗೆಲವು ಸಿಗಲಿದೆ. ಮುನಿರತ್ನ ಅವರು ಗೆದ್ದ ಬಳಿಕ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಯಾವುದೇ ಜಾತಿ ರಾಜಕಾರಣ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಎಲ್ಲ ಜಾತಿಯನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಒಕ್ಕಲಿಗ ಸಮುದಾಯದ ಸಚಿವರು ನಮ್ಮಲ್ಲಿ ಹೆಚ್ಚಿದ್ದಾರೆ. ಮುನಿರತ್ನ ಕೊರೊನಾ ಸಂದರ್ಭದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದು ಅವರು 40 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

- Advertisement -

Related news

error: Content is protected !!