Friday, April 26, 2024
spot_imgspot_img
spot_imgspot_img

ಬಂಡಾಯವೆದ್ದ ರಷ್ಯಾ ಸೈನಿಕರು; ತಮ್ಮ ಸೇನೆಯ ಹಿರಿಯ ಕಮಾಂಡರ್‌ನನ್ನೇ ಟ್ಯಾಂಕ್ ಹರಿಸಿ ಹತ್ಯೆ..!

- Advertisement -G L Acharya panikkar
- Advertisement -

ಉಕ್ರೇನ್ ವಿರುದ್ಧ ರಷ್ಯಾ ಸೇನೆ ನಡೆಸುತ್ತಿರುವ ಸೈನಿಕ ಕಾರ್ಯಾಚರಣೆ 31ನೇ ದಿನಕ್ಕೆ ಬಂದು ತಲುಪಿದೆ. ರಷ್ಯಾ ಸೇನೆಯ ಹಿರಿಯ ಕಮಾಂಡರ್ ಒಬ್ಬರನ್ನು ರಷ್ಯಾ ಸೈನಿಕರೇ ಕೊಂದಿದ್ದಾರೆ ಎಂದು ಸುದ್ದಿ ರಾಷ್ಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಉಕ್ರೇನ್​ನ ಸೈನಿಕ ಬಲವನ್ನು ತಪ್ಪಾಗಿ ಅಂದಾಜು ಮಾಡಿದ್ದ ರಷ್ಯಾ ಕೆಲವೇ ದಿನಗಳಲ್ಲಿ ಸುಲಭವಾಗಿ ಗೆಲ್ಲಬಹುದು ಎಂಬ ಆಸೆಯಲ್ಲಿತ್ತು. ಆದರೆ ಉಕ್ರೇನ್ ದೇಶಕ್ಕೆ ವಿದೇಶಿ ನೆರವು ಬಂದು ಕಾಲು ಊರಿ ನಿಂತು ಹೋರಾಡುತ್ತಿದೆ. ಇತ್ತ ರಷ್ಯಾ ಪಡೆಗಳಲ್ಲಿ ಸಾವುನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಉಕ್ರೇನ್​ನಲ್ಲಿ ಈವರೆಗೆ ರಷ್ಯಾ ಸೇನೆಯ 7 ಉನ್ನತ ಅಧಿಕಾರಿಗಳು ಮೃತಪಟ್ಟಿದ್ದಾರೆ. ಈ ಪೈಕಿ 7ನೆಯವರಾಗಿ ಮೃತಪಟ್ಟವರು ಲೆಫ್ಟಿನೆಂಟ್ ಜನರಲ್ ಜಾಕೊವ್ ರೆಝೆನ್​ಸ್ಟೆವ್. ರಷ್ಯಾ ಸೇನೆಯ ದಕ್ಷಿಣ ಮಿಲಿಟರಿ ವಲಯದ 49ನೇ ಸಮಗ್ರ ತುಕಡಿಯ ಕಮಾಂಡರ್ ಆಗಿದ್ದರು.

ಕಳೆದ ಒಂದು ತಿಂಗಳ ಅವಧಿಯಲ್ಲಿ ಯಾವೊಂದು ನಗರವನ್ನು ವಶಪಡಿಸಿಕೊಳ್ಳಲು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಈವರೆಗೆ ರಷ್ಯಾದ 1351 ಸೈನಿಕರು ಮೃತಪಟ್ಟಿದ್ದು, 3835 ಮಂದಿ ಗಾಯಗೊಂಡಿದ್ದಾರೆ.

ದಿನಕಳೆದಂತೆ ಉಕ್ರೇನ್​ಗೆ ಇತರ ದೇಶಗಳಿಂದ ಹೆಚ್ಚಿನ ನೆರವು ಹರಿದುಬರುತ್ತಿದೆ. ಆದರೆ ರಷ್ಯಾ ಆರ್ಥಿಕವಾಗಿ ಜರ್ಝರಿತವಾಗುತ್ತಿದ್ದು, ರಷ್ಯಾದ ಸೈನಿಕರಲ್ಲಿ ಬೇಗ ಯುದ್ಧ ಮುಗಿಯುತ್ತಿಲ್ಲ ಎಂಬ ಹತಾಶೆ ಕಾಡುತ್ತಿದೆ. ಕೀವ್ ನಗರದ ಪಶ್ಚಿಮ ಭಾಗದಲ್ಲಿರುವ ಪಟ್ಟಣ ಮಕರಿವ್​ನಲ್ಲಿ ಹತಾಶ ಸೈನಿಕರು ತಮ್ಮ ಕಮಾಂಡರ್ ವಿರುದ್ಧವೇ ಬಂಡೆದ್ದು ಕೊಲೆ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಗಳು ಹೇಳಿವೆ. ತಮ್ಮ ತುಕಡಿಯ ಅರ್ಧಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರಿಂದ ಸಿಟ್ಟಿಗೆದ್ದ ರಷ್ಯಾ ಸೈನಿಕರು ತಮ್ಮ ಕಮಾಂಡರ್ ಮೇಲೆಯೇ ಟ್ಯಾಂಕ​ ಹರಿಸಿ ಕೊಂದುಹಾಕಿದರು ಎಂದು ಹೇಳಲಾಗಿದೆ.

- Advertisement -

Related news

error: Content is protected !!