Wednesday, June 17, 2026
spot_imgspot_img
spot_imgspot_img

ಪುತ್ತೂರು: ಸ್ಕೂಟರ್‌ಗೆ ಡಿಕ್ಕಿ ಹೊಡೆದ ಆಟೋ ರಿಕ್ಷಾ; ಸವಾರೆಗೆ ಗಾಯ

- Advertisement -
- Advertisement -

ಪುತ್ತೂರು : ಆಟೋ ರಿಕ್ಷಾವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರೆ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಸಂಪ್ಯ ಬಳಿ ಕಲ್ಲರ್ಪೆಯಲ್ಲಿ ನಡೆದಿದೆ.

ಪುತ್ತೂರು ನಿವಾಸಿ ಕನಿಷ್ಕ ಶೆಟ್ಟಿ (25) ಎಂಬವರು ಸ್ಕೂಟರ್‌ನಲ್ಲಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪ್ಯ ಬಳಿ ಕಲ್ಲರ್ಪೆ ಎಂಬಲ್ಲಿಗೆ ತಲುಪಿದಾಗ ಆರೋಪಿ ರಿಕ್ಷಾ ಚಾಲಕನು ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರ್‌ಗೆ ಢಿಕ್ಕಿ ಮಾಡಿದ್ದು ಪರಿಣಾಮ ಸವಾರೆ ಸ್ಕೂಟರ್‍ ಸಮೇತ ರಸ್ತೆಗೆ ಬಿದ್ದು ಗಾಯಗಳಾಗಿದ್ದು ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!