- Advertisement -
- Advertisement -



ಶೇಷಾದ್ರಿಪುರಂ: ಕೆನರಾ ಬ್ಯಾಂಕ್ ನಲ್ಲಿ ಕಳವಿಗೆ ವಿಫಲ ಯತ್ನ ನಡೆದಿದ್ದು, ಬ್ಯಾಂಕ್ ಗ್ರಿಲ್ ಕೊರೆದು ಒಳನುಗ್ಗಿದ್ದ ಕಳ್ಳರು, ಸೈರನ್ ಕೂಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳರು ಬ್ಯಾಂಕ್ ಹಿಂಬದಿ ಗ್ರಿಲ್ ಕೊರೆದು ಒಳನುಗ್ಗಿದ್ದರು ಎಂದು ತಿಳಿದುಬಂದಿದೆ.
ಬ್ಯಾಂಕ್‌ನ ಒಳನುಗ್ಗಿ ಕಳ್ಳರು ಇಂಚಿಂಚು ಜಾಲಾಡಿ, ಸ್ಟ್ರಾಂಗ್ ರೂಮ್‌ನ ವೈಯರ್‌ಕಟ್ ಮಾಡಿದ್ದರು. ವೈಯರ್‌ಕಟ್ ಮಾಡುತ್ತಿದಂತೆ ಸೈರನ್ ಸದ್ದು ಮೊಳಗಿದೆ. ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಬ್ಯಾಂಕ್‌ಗೆ ಶ್ವಾನ ದಳ, ಸೋಕೋ ಟೀಂ ಭೇಟಿ ಪರಿಶೀಲನೆ ನಡೆಸಿದೆ. ಯಾವ ಭಾಗದಿಂದ ಹೊರಹೋಗಿದ್ದಾರೆ ಎಂಬುದನ್ನು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.
- Advertisement -








