
ಕುಶಾಲನಗರ: ಎಸ್ಎಲ್ವಿ ಗ್ರೂಪ್ನ ಅಂಗ ಸಂಸ್ಥೆಯಾದ ಎಸ್ಎಲ್ವಿ ಬುಕ್ ಹೌಸ್ ತನ್ನ ಸೇವೆಯನ್ನು ವಿಸ್ತರಿಸುವ ಭಾಗವಾಗಿ ಕುಶಾಲನಗರದಲ್ಲಿ ನೂತನ ಶಾಖೆಯನ್ನು ಆರಂಭಿಸುತ್ತಿದೆ.

ಉದ್ಘಾಟನಾ ಸಮಾರಂಭವು ಏಪ್ರಿಲ್ 8, 2026ರಂದು ಬೆಳಿಗ್ಗೆ 9.29ಕ್ಕೆ ನಡೆಯಲಿದೆ. ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಆರ್ಚಕರಾದ ಶ್ರೀ ವೆಂಕಟರಮಣ ಅಸ್ರಣ್ಣ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಪುಸ್ತಕಗಳು, ಸ್ಟೇಷನರಿ, ಗಿಫ್ಟ್ ಐಟಮ್ಸ್, ಆಟಿಕೆಗಳು ಹಾಗೂ ಕ್ರೀಡಾ ಸಾಮಗ್ರಿಗಳು ಒಂದೇ ಕಡೆ ಲಭ್ಯವಾಗುವಂತೆ ವಿನ್ಯಾಸಗೊಳಿಸಿರುವ ಈ ಬುಕ್ ಹೌಸ್ ಸ್ಥಳೀಯರಿಗೆ ಅನುಕೂಲಕರ ಸೇವೆ ಒದಗಿಸುವ ಉದ್ದೇಶ ಹೊಂದಿದೆ.





ಕುಶಾಲನಗರದ ಬಿ.ಎಂ. ರಸ್ತೆಯ ಕೆನರಾ ಬ್ಯಾಂಕ್ ಕಾಂಪ್ಲೆಕ್ಸ್ನಲ್ಲಿ ಈ ಶಾಖೆ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಪ್ರತಿನಿಧಿಗಳಾದ ಶ್ರೀಮತಿ ಹೇಮಾವತಿ ದಾಸ್ ಹಾಗೂ ಶ್ರೀ ದಿವಾಕರ ದಾಸ್ ನೇರ್ಲಾಜೆ ಮನವಿ ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ 9740888907 ಅಥವಾ 9972607879 ಸಂಪರ್ಕಿಸಬಹುದು.








