- Advertisement -
- Advertisement -


ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿದ್ದು, ಎಸ್ಎಸ್ಎಲ್ಸಿ ವೆಬ್ಸೈಟ್ನಲ್ಲಿ ಕೀ ಉತ್ತರಗಳನ್ನ ಪ್ರಕಟಿಸಲಾಗಿದೆ. ಸದ್ಯ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ತಾತ್ಕಾಲಿಕ ದಿನಾಂಕ ನಿಗದಿ ಮಾಡಿದ್ದು, ಮೇ 12ರಂದು ರಿಸಲ್ಟ್ ಬಿಡುಗಡೆಯಾಗಲಿದೆ ಎಂದಿದೆ.
ರಾಜ್ಯದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 11ರ ತನಕ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು.ಏಪ್ರಿಲ್ 12ರಿಂದಲೇ ವೆಬ್ಸೈಟ್ನಲ್ಲಿ ಕೀ ಉತ್ತರಗಳು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲಾಗಿದೆ. ಇನ್ನು ಮೇ 12ರಂದು ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ತಿಳಿಸಿದೆ.


- Advertisement -








