ಬಂಟ್ವಾಳ: ಗಡಿ ಸಮಸ್ಯೆ ಯ ಹಿನ್ನೆಲೆಯಲ್ಲಿ ಬಾಕಿಯಾಗಿದ್ದ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿ ಯೋರ್ವನನ್ನು ಸಮಯಕ್ಕೆ ಸರಿಯಾಗಿ ಪರೀಕ್ಷೆ ಗೆ ಹಾಜರಾಗಲು ಶಿಕ್ಷಕರ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಎಸ್.ಎಸ್.ಎಲ್.ಸಿ. ಕನ್ನಡ ಪರೀಕ್ಷೆ ದಿನ ಮುಡಿಪು ಪರೀಕ್ಷಾ ಕೇಂದ್ರಕ್ಕೆ ಪ್ರತಿ ದಿನ ಸಮಯಕ್ಕೆ ಸರಿಯಾಗಿ ಕಳೆದ ಎಲ್ಲಾ ಪರೀಕ್ಷೆಗೂ ಹಾಜರಾಗಿದ್ದ ಸ.ಪ್ರೌ ಸಾಲೆತ್ತೂರಿನ ಬಂಟ್ವಾಳ ಶಾಲೆಯ ವಿದ್ಯಾರ್ಥಿ ತಂಝೀರ್ ಇವನು ಸಮಯ 9.30ಆದರು ಹಾಜರಾಗಿರಲಿಲ್ಲ.
ಪ್ರತಿ ದಿನ ಆತ ಸ್ವಂತ ವಾಹನದಲ್ಲಿ ಮನೆಯವರ ಜೊತೆ ಬಂದಿರುತ್ತಿದ್ದ ಆತನ ಗೆಳೆಯರು ತಂಝೀರ್ ಬರದಿರುವ ಬಗ್ಗೆ ಕೇರಳದ ಬಸ್ ವ್ಯವಸ್ಥೆಯ ನೋಡಲ್ ಆದ ವಿನಾಯಕ ನಾಯಕ ಮತ್ತು ರಾಘವೇಂದ್ರ ಅವರಿಗೆ ತಿಳಿಸಿದ ನಂತರ ಮನೆಯವರ ಸಂಪರ್ಕ ಮಾಡಲಾಯಿತು, ಅವರು ನೀಡಿದ ಎರಡು ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ನಂತರ ಸಂಬಂಧಿಕರ ದೂರವಾಣಿ ಸಂಖ್ಯೆ ಸಿಕ್ಕಿದ್ದು, ಅವನು ಮನೆಯಿಂದ ಹೊರಟಿರುವುದಾಗಿ ತಿಳಿಸಿದರು.
ಆತ ಪ್ರತಿ ದಿನ ಬರುರುರುತ್ತಿದ್ದ ಹೂ ಹಾಕುವ ಕಲ್ಲು ದಾರಿ ಅಲ್ಲದೇ ನಂದ್ರಬೈಲು ಕೈರಂಗಳ ದಾರಿ ಮತ್ತು ಪಾತೂರು ಬಾಕ್ರಬೈಲ್ ರಸ್ತೆಗಳಲ್ಲಿ ಎಲ್ಲಾ ರೀತಿಯ ಪ್ರವೇಶ ಮುಚ್ಚಿರುವ ಕಾರಣ ವಿದ್ಯಾರ್ಥಿ ದಾರಿ ತಪ್ಪಿದಲ್ಲದೇ ಶಿಕ್ಷರಿಗೆ ವಿದ್ಯಾರ್ಥಿಯೊಡನೆ ಸಂಪರ್ಕ ಸಾಧಿಸಲು ಅಸಾಧ್ಯವಾಯಿತು. ಶಿಕ್ಷಕರಿಬ್ಬರು ಎಲ್ಲಾ ಗಡಿಗಳಿಗೂ ಸ್ವಂತ ವಾಹನದಲ್ಲಿ ಹೋಗಿ ಪರಿಶೀಲಿಸಿದಾಗ ಶಾಲಾ ಸಮವಸ್ತ್ರಧರಿಸಿರುವ ವಿದ್ಯಾರ್ಥಿ ಮತ್ತು ಆತನ ಅಣ್ಣನೊಂದಿಗೆ ಬರುತ್ತಿರುವ ದಾರಿ ಬಗ್ಗೆ ತಕ್ಷಣ ಮಾಹಿತಿ ಸಾರ್ವಜನಿಕರಿಂದ ಶಿಕ್ಷಕರಿಗೆ ದೊರಕಿತು. ಶಿಕ್ಷರಿಬ್ಬರು ಮತ್ತೇ ನಾರ್ಯ ಗಡಿಗೆ ತಲುಪಿ ಪೊಲೀಸರಲ್ಲಿ ವಿನಂತಿಸಿ ವಿದ್ಯಾಥಿಯನ್ನು ತಡೆಗೋಡೆ ದಾಟಿಸಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಯಶಸ್ವಿಯಾದರು.