Friday, April 19, 2024
spot_imgspot_img
spot_imgspot_img

ದಕ್ಷಿಣ ಕನ್ನಡದಲ್ಲಿ 215, ಉಡುಪಿ 117 ಮಂದಿಗೆ ಕೊರೊನಾ ಸೋಂಕು :ರಾಜ್ಯದಲ್ಲಿ ಇಂದು 5872 ಮಂದಿಗೆ ಕೊರೊನಾ ಸೋಂಕು..!

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ. ಇಂದು ಒಂದೇ ದಿನ 5872 ಮಂದಿ ಮೇಲೆ ಅಟ್ಯಾಕ್ ಮಾಡಿದೆ. ಅಲ್ಲದೇ,88 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 782773 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ 671618 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ವೈರಸ್ 2717 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಒಂದರಲ್ಲೇ 53 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದೆ .ಸಂಖ್ಯೆ ನಗರದಲ್ಲಿ ಇಂದು 3844 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ನಗರದಲ್ಲಿ ಸಕ್ರಿಯ ಪ್ರಕರಣದ 63343 ಮಂದಿಯಲ್ಲಿ  ಪತ್ತೆಯಾಗಿದೆ.

ಮಂಗಳೂರು:- ದ.ಕ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ರಣಕೇಕೆ ಹಾಕಿದೆ. ಇಂದು ಕೂಡ 215 ಮಂದಿಗೆ ಸೋಂಕು ತಗುಲಿದೆ.302 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 28782 ಆಗಿದ್ದು, ಇಲ್ಲಿಯವರೆಗೆ 25286 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.2844 ಮಂದಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒಟ್ಟು ಜಿಲ್ಲೆಯಲ್ಲಿ 650 ಮಂದಿ ಸೊಂಕಿಗೆ ಬಲಿಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 117 ಮಂದಿಗೆ ಪತ್ತೆಯಾಗಿದೆ. ಒಟ್ಟು ಸೊಂಕಿತರ ಸಂಖ್ಯೆ 21129 ಆಗಿದ್ದು ,ಇಲ್ಲಿಯವರೆಗೆ 19305 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.1648 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!