Wednesday, August 26, 2026
spot_imgspot_img
spot_imgspot_img

ಜಾವೆಲಿನ್ ಥ್ರೋ ಅಭ್ಯಾಸದ ವೇಳೆ ಜಾವೆಲಿನ್ ತಲೆಗೆ ಚುಚ್ಚಿ ವಿದ್ಯಾರ್ಥಿ ಸಾವು

- Advertisement -
- Advertisement -

ಶಾಲೆಯೊಂದರಲ್ಲಿ ಅಭ್ಯಾಸದ ವೇಳೆ ಮತ್ತೊಬ್ಬ ವಿದ್ಯಾರ್ಥಿ ಎಸೆದ ಜಾವೆಲಿನ್ ತಲೆಗೆ ಚುಚ್ಚಿದ ಪರಿಣಾಮ 15 ವರ್ಷದ ಬಾಲಕ ಮೃತಪಟ್ಟ ದುರ್ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಗೋರೆಗಾಂವ್ ನ ಪುರಾರ್ ನ ಐಎನ್ ಟಿ ಇಂಗ್ಲಿಷ್ ಸ್ಕೂಲ್ ನಲ್ಲಿ ಮಧ್ಯಾಹ್ನ ವಿದ್ಯಾರ್ಥಿಗಳು ಶಾಲೆಯ ಮೈದಾನದಲ್ಲಿ ಜಾವಲಿನ್ ಎಸೆತವನ್ನು ಅಭ್ಯಾಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ . ಈ ವೇಳೆ ಹುಜಾಫ ದವಾರ (15) ಎಂಬ ವಿದ್ಯಾರ್ಥಿಯೂ ತಾಲೂಕು ಮಟ್ಟದ ಸ್ಪರ್ಧೆಗಾಗಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದು, ಅಭ್ಯಾಸ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಜಾವಲಿನ್ ಎಸೆದಿದ್ದ. ಆಗ ಕೆಳಕ್ಕೆ ಬಾಗಿ ಶೂ ಲೇಸ್ ಕಟ್ಟುತ್ತಿದ್ದ ಹುಜಾಫ ದವಾರ ತಲೆಗೆ ಜಾವಲಿನ್ ಚುಚ್ಚಿದ್ದು, ಪರಿಣಾಮ ಬಾಲಕ ಸ್ಥಳದಲ್ಲಿ ಕುಸಿದು ಬಿದ್ದು, ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!