Friday, May 17, 2024
spot_imgspot_img
spot_imgspot_img

ಉಪ್ಪಿನಂಗಡಿ: ವಿದ್ಯುತ್‌ ಶಾಕ್ ಹೊಡೆದು ವಿದ್ಯಾರ್ಥಿ ಮೃತ್ಯು..!!

- Advertisement -G L Acharya panikkar
- Advertisement -
vtv vitla

ಉಪ್ಪಿನಂಗಡಿ: ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾಮದ ಅಡಕ್ಕಲ್ ಕುಮಾರಧಾರ ನದಿಯ ಬಳಿ ನಡೆದಿದೆ.

ಶರೀಪುದ್ದೀನ್(19) ಮೃತ ಯುವಕ. ಶರೀಪುದ್ದೀನ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತ್ತೀಚೆಗೆ ತೇರ್ಗಡೆಯಾಗಿದ್ದ.

ಈ ಬಗ್ಗೆ ಮೃತ ಯುವಕನ ಮಾವ ಹಿರೇಬಂಡಾಡಿ ನಿವಾಸಿ ಹುಮ್ಮಬ್ಬ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ತಂಗಿ ಹಾಗೂ ಆಕೆಯ ಮಗ ಶರೀಫುದ್ದೀನ್ ಅವರ ಮನೆಯಲ್ಲಿದ್ದರು, ಮೇ 21ರಂದು ಸಂಜೆ 7:30ಕ್ಕೆ ನನಗೆ ಸ್ಥಳೀಯರು ಕರೆ ಮಾಡಿ ಶರೀಫುದ್ದೀನ್ ಗೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ನ ಕುಮಾರಧಾರ ನದಿ ಕಿನಾರೆಯ ಬಳಿ ವಿದ್ಯುತ್ ತಗುಲಿ ಅಸ್ವಸ್ಥಗೊಂಡ ವಿಚಾರ ತಿಳಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದರು. ಅಲ್ಲಿಗೆ ಹೋಗಿ ನೋಡಿದಾಗ ಶರೀಫುದ್ದೀನ್ ಮೃತಪಟ್ಟಿದ್ದ, ಆತನ ಎದೆ ಭಾಗದಲ್ಲಿ ವಿದ್ಯುತ್‌ ಸ್ಪರ್ಶ ಆಗಿರುವುದು ಕಂಡು ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!