Tuesday, September 1, 2026
spot_imgspot_img
spot_imgspot_img

ಸುಬ್ರಹ್ಮಣ್ಯ: ಯಾತ್ರಿಕರಿಗೆ ದಂಡ ವಿಧಿಸಿದ ಪೊಲೀಸರು!

- Advertisement -
- Advertisement -

ಸುಬ್ರಹ್ಮಣ್ಯ: ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೀಲ್ ಡೌನ್ ಮಾಡಿದ್ದರೂ ಹೊರ ಜಿಲ್ಲೆಗಳಿಂದ ಕುಕ್ಕೆಗೆ ಯಾತ್ರಿಕರು ಆಗಮಿಸುತ್ತಿದ್ದಾರೆ.

ಸೋಮವಾರದಿಂದ ಸೀಲ್ ಡೌನ್ ಮಾಡಲಾಗಿದ್ದರೂ, ಪಂಚಾಯತಿ ವ್ಯಾಪ್ತಿಯ ಪ್ರವೇಶ ರಸ್ತೆಗಳನ್ನು ಬಂದ್ ಮಾಡಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಕುಲ್ಕುಂದ ಭಾಗದಿಂದ ಕುಕ್ಕೆ ಕಡೆಗೆ ಯಾತ್ರಿಕರು ವಾಹನಗಳಲ್ಲಿ ಬರುತ್ತಿದ್ದು, ಅಲ್ಲಿನ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಲವು ವಾಹನಗಳನ್ನು ಆದೇಶದ ಬಗ್ಗೆ ಮಾಹಿತಿ ನೀಡಿ ಹಿಂದಕ್ಕೆ ಕಳುಹಿಸಿದ್ದಾರೆ. ಈ ವೇಳೆ ದಂಡ ವಿಧಿಸಲಾಗಿದ್ದು, ಆದರೂ ಕೆಲವು ವಾಹನಗಳು ಒಳ ರಸ್ತೆಯ ಮೂಲಕ ರಥ ಬೀದಿಗೆ ಬಂದಿವೆ ಎಂದು ವರದಿಯಾಗಿದೆ.

- Advertisement -

Related news

error: Content is protected !!