Tuesday, June 9, 2026
spot_imgspot_img
spot_imgspot_img

ಉದನೆಯ ತೂಗುಸೇತುವೆ ಬಳಿ ವ್ಯಕ್ತಿಯ ಚಪ್ಪಲ್ ಹಾಗೂ ಬ್ಯಾಗ್ ಪತ್ತೆ; ನದಿಗೆ ಹಾರಿರುವ ಶಂಕೆ!

- Advertisement -
- Advertisement -

ನೆಲ್ಯಾಡಿ: ಕಡಬ ತಾಲೂಕಿನ ಉದನೆಯ ತೂಗುಸೇತುವೆಯಲ್ಲಿ ವ್ಯಕ್ತಿಯೊಬ್ಬರ 1 ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದೆ. ಯಾರೋ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಬ್ಯಾಗ್ ನಲ್ಲಿ ಗುರುತು ಚೀಟಿ ಪತ್ತೆಯಾಗಿದ್ದು ಪುಟ್ಟಪರ್ತಿ ನಿವಾಸಿ ಎಂದು ಹೇಳಲಾಗಿದೆ. ಅಲ್ಲದೇ ಬ್ಯಾಗ್ ನೊಳಗೆ ಡೆತ್ ನೋಟ್ ಹಾಗೂ ಧರ್ಮಸ್ಥಳದಿಂದ ಉದನೆಗೆ ಮಾಡಲಾಗಿದ್ದ ಬಸ್ ಟಿಕೆಟ್ ಬ್ಯಾಗ್ ನಲ್ಲಿ ಪತ್ತೆಯಾಗಿದೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Related news

error: Content is protected !!