Monday, June 15, 2026
spot_imgspot_img
spot_imgspot_img

ಮಲಯಾಳಂ ನಟಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಜನಪ್ರಿಯ ಮಲಯಾಳಂ ನಟಿ ರೆಂಜುಷಾ ಮೆನನ್ (35) ಅವರು ತಿರುವನಂತಪುರಂನ ತಮ್ಮಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಬೆಳಿಗ್ಗೆ ಅವರು ತಮ್ಮ ಫ್ಲ್ಯಾಟ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ತಮ್ಮಪತಿ, ನಟ ಮನೋಜ್ ಜೊತೆ ವಾಸಿಸುತ್ತಿದ್ದರು. ರೆಂಜುಷಾ ಅವರು ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದರು ಎಂದು ಕೆಲ ವರದಿಗಳು ಹೇಳಿವೆ.
ಇದೊಂದು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಲಾಗಿದೆಯಾದರೂ ಆತ್ಮಹತ್ಯೆಗೆ ಕಾರಣವಾಗಿರುವ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ.

ಕೊಚ್ಚಿ ಮೂಲದ ರೆಂಜುಷಾ ಅವರು ಟಿವಿ ಆಂಕರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿ ನಂತರ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಸ್ತ್ರೀ ಧಾರಾವಾಹಿಯಲ್ಲಿ ಮೊದಲು ಕಾಣಿಸಿಕೊಂಡ ಅವರು ಪೋಷಕ ನಟಿ ಪಾತ್ರದಲ್ಲಿ “ಸಿಟಿ ಆಫ್ ಗಾಡ್”, “ಮೇರಿಕ್ಕುಂಡೋರು ಕಂಜಾಡು”, “ಬಾಂಬೆ ಮಾರ್ಚ್” “ಕಾರ್ಯಸ್ಥಾನ್,” “ಒನ್ ವೇ ಟಿಕೆಟ್”, “ಅದ್ಭುತ ದ್ವೀಪು” ಮುಂತಾದ ಟಿವಿ ಧಾರಾವಾಹಿ, ಸಿನೆಮಾಗಳಲ್ಲಿ ಮಿಂಚಿದ್ದರು.
ಹಲವಾರು ಧಾರಾವಾಹಿಗಳನ್ನು ನಿರ್ಮಿಸಿದ್ದ ಅವರು ವೃತ್ತಿಪರ ಭರತನಾಟ್ಯಂ ಕಲಾವಿದೆಯೂ ಆಗಿದ್ದರು.

ತಮ್ಮ ಸಾವಿಗೆ ಕೆಲವೇ ಗಂಟೆಗಳ ಮೊದಲು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ “ಆನಂದ ರಾಗಂ” ಸಹನಟಿ ಶ್ರೀದೇವಿ ಅನಿಲ್‌ ಅವರೊಂದಿಗಿನ ತಮಾಷೆಯ ವೀಡಿಯೋ ಶೇರ್ ಮಾಡಿದ್ದರು.

- Advertisement -

Related news

error: Content is protected !!