Saturday, September 5, 2026
spot_imgspot_img
spot_imgspot_img

ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಬ್ರಹ್ಮಾವರ: ಕುಂಜಾಲು ಸಮೀಪದ ಹೇರಂಜೆ ಕ್ರಾಸ್‌ ಎಂಬಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಸುಶ್ಮಿತಾ (23) ಹಾಗೂ ಅವರ ಮಗು ಶ್ರೇಷ್ಠ (1.6 ವರ್ಷ) ಎಂದು ಗುರುತಿಸಲಾಗಿದೆ.ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಸುಶ್ಮಿತಾ ತನ್ನ ಮಗು ಜೊತೆ ನೇಣಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!