ವಿಟ್ಲ: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡ ಭಾನುವಾರ ಲಾಕ್ ಡೌನ್ ವಿಟ್ಲದಲ್ಲಿ ಸಂಪೂರ್ಣವಾಗಿ ಯಶಸ್ವಿಗೊಂಡಿದ್ದು, ಅಗತ್ಯ ವಸ್ತುಗಳ ಸಹಿತ ಎಲ್ಲವೂ ಸಂಪೂರ್ಣ ಲಾಕ್ ಆಗಿದೆ.
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಪ್ರತಿ ಭಾನುವಾರ ರಾಜ್ಯದಾದ್ಯಂತ ಲಾಕ್ ಡೌನ್ ಮಾಡಲಾಗಿತ್ತು.

ವಿಟ್ಲದಲ್ಲಿ ಜನರು ಪೇಟೆಗೆ ಕಾಲಿಡಲಿಲ್ಲ. ಅಗತ್ಯ ವಸ್ತುಗಳಾದ ದಿನಸಿ, ಮೆಡಿಕಲ್, ಹಾಲು ಇನ್ನೀತರ ವಸ್ತುಗಳಿಗೆ ವಿನಾಯಿತಿ ನೀಡಲಾಗಿದ್ದರೂ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಆಟೋ ರಿಕ್ಷಾ, ಟೂರಿಸ್ಟ್ ಕಾರು, ಸೇರಿದಂತೆ ಖಾಸಗಿ ವಾಹನಗಳು ಪೇಟೆ ಆಗಮಿಸಿಲ್ಲ. ಜನರಿಲ್ಲದೇ ಪೇಟೆ ಬಿಕೋ ಎನ್ನುತ್ತಿತ್ತು.

ಒಂದೆರಡು ಹಾಲಿನ ಹಾಗೂ ದಿನಪತ್ರಿಕೆ ಅಂಗಡಿಗಳು ಕೆಲ ಹೊತ್ತು ಬಾಗಿಲು ತೆರೆದರೂ ಜನರಿಲ್ಲದೇ ಅವರು ಕೂಡ ಬಂದ್ ಮಾಡಿದ್ದಾರೆ. ತುರ್ತು ಅವಶ್ಯಕತೆಗಾಗಿ ಆಸ್ಪತ್ರೆ ಹೋಗುವ ಕೆಲವು ಬೆರಳೆಣಿಕೆ ವಾಹನ ಮಾತ್ರ ಸಂಚಾರ ಮಾಡುತ್ತಿದೆ. ಒಟ್ಟಿನಲ್ಲಿ ಸರ್ಕಾರ ಕೈಗೊಂಡ ಭಾನುವಾರ ಲಾಕ್ ಡೌನ್ ಗೆ ವ್ಯಾಪಾಕ ಬೆಂಬಲ ವ್ಯಕ್ತವಾಗಿದೆ.


