Friday, April 26, 2024
spot_imgspot_img
spot_imgspot_img

ಮಹಿಳಾ ಪೊಲೀಸ್ ಅಧಿಕಾರಿಯನ್ನು ಗಂಡ, ಮಕ್ಕಳೆದುರೇ ಕೊಂದ ತಾಲಿಬಾನಿಗಳು

- Advertisement -G L Acharya panikkar
- Advertisement -

ಕಾಬುಲ್: ಅಫ್ಘಾನಿಸ್ತಾನ ಬಹುತೇಖ ಎಲ್ಲಾ ಪ್ರದೇಶವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಪ್ರತಿನಿತ್ಯ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ದಿನಕ್ಕೆ ಹತ್ತಾರು ಕರುಳು ಹಿಂಡುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ. ಇಲ್ಲಿನ ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆಂದು ಬಲ್ಲ ಮೂಲಗಳು ತಿಳಿಸಿದೆ.

ಆಫ್ಘಾನ್ ನ ಘೋರ್ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಕೋಹ್ ನಲ್ಲಿ ಈ ದುಷ್ಕೃತ್ಯ ನಡೆದಿದೆ. ಸ್ಥಳೀಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಬಾನು ನೆಗರ್ 8 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರೋಡ್ ಡಿವೈಡರ್ ಗೆ ಗುದ್ದಿದ ವಿಧಾನ ಪರಿಷತ್ ಸದಸ್ಯನ ಫೆರಾರಿ ಕಾರು

ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಹುಡುಕಿ ಮರಣದಂಡನೆ ನೀಡುತ್ತಿರುವ ತಾಲಿಬಾನಿಗಳು, ಮಹಿಳಾ ಪೊಲೀಸ್ ಅಧಿಕಾರಿ ನೆಗರ್ ನನ್ನು ಅವರ ಗಂಡ ಮತ್ತು ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯ ತಾಲಿಬಾನ್ ಈ ಘಟನೆಯನ್ನು ತನಿಖೆ ನಡೆಸುವ ಭರವಸೆ ನೀಡಿದೆ ಎಂದು ಕುಟುಂಬ ಹೇಳಿದೆ.

ಇದನ್ನೂ ಓದಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ; ಸಾವಿರಾರು ಮೌಲ್ಯದ ಗಾಂಜಾ ವಶಕ್ಕೆ

ಅಫ್ಘಾನಿಸ್ತಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ ತಾಲಿಬಾನ್‌ಗಳು ತಮ್ಮನ್ನು ತಾವು ತಿಳಿದಿರುವುದಕ್ಕಿಂತ ಹೆಚ್ಚು ಸಹಿಷ್ಣು ಮತ್ತು ಉದಾರವಾದಿಗಳೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದಾಗ್ಯೂ, ಕಾಬುಲ್‌ನಲ್ಲಿ ಉಗ್ರರ ಗುಂಪು ಪುನರುತ್ಥಾನಗೊಂಡ ದೇಶದಲ್ಲಿ ಕ್ರೌರ್ಯ ಮತ್ತು ದಮನದ ನೀತಿಯನ್ನು ಅನುಸರಿಸಿದ್ದು, ರಕ್ತಪಿಪಾಸುಗಳಂತೆ ತಮ್ಮ ವಿರೋಧಿಗಳ ಮಾರಣಹೋಮ ಮಾಡುತ್ತಿರುವುದಲ್ಲದೆ, ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ.

- Advertisement -

Related news

error: Content is protected !!