Monday, June 22, 2026
spot_imgspot_img
spot_imgspot_img

TATA ಗ್ರೂಪ್ ಪಾಲಾದ ‘ಏರ್ ಇಂಡಿಯಾ’; ಅಧಿಕೃತ ಘೋಷಣೆ

- Advertisement -
- Advertisement -
driving

ನವದೆಹಲಿ: ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಏರ್​ಇಂಡಿಯಾ ಖಾಸಗಿ ಮಾರಾಟ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಟಾಟ ಗ್ರೂಪ್ ಏರ್ ಇಂಡಿಯಾ ಸಂಸ್ಥೆಯನ್ನು ₹18,718 ಕೋಟಿಗೆ ಹರಾಜಿನಲ್ಲಿ ಖರೀದಿಸಿದೆ. ಈ ಮೂಲಕ ತನ್ನಿಂದ ಕೈಬಿಟ್ಟುಹೋಗಿದ್ದ ಏರ್​ ಇಂಡಿಯಾ 67 ವರ್ಷಗಳ ಬಳಿಕ ಇದೀಗ ಮರಳಿ ಟಾಟಾ ಗ್ರೂಪ್ ಪಾಲಾದಂತಾಗಿದೆ. ಕಳೆದ ತಿಂಗಳು ಟಾಟಾ ಸನ್ಸ್ ಹಾಗೂ ಸ್ಪೈಸ್​ಜೆಟ್​ನ ಮುಖ್ಯಸ್ಥ ಅಜಯ್ ಸಿಂಗ್ ಹರಾಜು ಕೂಗಿದ್ದರು, ಕೊನೆಗೆ ಇದೀಗ ಟಾಟಾ ಸನ್ಸ್ ಗ್ರೂಪ್​ ಹರಾಜಿನಲ್ಲಿ ಗೆದ್ದಿದೆ.

ಇನ್ನು ಈ ಹರಾಜಿನಲ್ಲಿ ಏರ್ ಇಂಡಿಯಾದ ಭೂಮಿ ಮತ್ತು ಕಟ್ಟಡಗಳು ಒಳಗೊಂಡಿರುವುದಿಲ್ಲ. ಇವುಗಳನ್ನು ಸರ್ಕಾರಕ್ಕೆ ವರ್ಗಾಯಿಸಲಾಗುವುದು ಎಂಬ ಮಾಹಿತಿ ಇದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಹೊರಡಿಸಿದೆ. ಕೇಂದ್ರ ಸರ್ಕಾರ ನಷ್ಟದಲ್ಲಿ ನಡೆಯುತ್ತಿದ್ದ ಏರ್​ ಇಂಡಿಯಾಗೆ 2009 ರಿಂದ 1,10,276 ಕೋಟಿ ರೂಗಳಷ್ಟು ನೆರವನ್ನು ನೀಡಿತ್ತು. 2021 ರ ಡಿಸೆಂಬರ್​ಗೆ ಸರ್ಕಾರ ಮತ್ತು ಏರ್ ಇಂಡಿಯಾ ನಡುವಿನ ವ್ಯವಹಾರ ಕೊನೆಗೊಳ್ಳಲಿದೆ.

ಆಗಸ್ಟ್ 31, 2021 ರ ಹೊತ್ತಿಗೆ, ಏರ್ ಇಂಡಿಯಾ ಒಟ್ಟು ₹ 61,562 ಕೋಟಿ ಸಾಲವನ್ನು ಹೊಂದಿದೆ, ಅದರಲ್ಲಿ ₹ 15,300 ಅನ್ನು ಬಿಡ್ ಮಾಡಿದವರು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಪಾಂಡೆ ಹೇಳಿದ್ದಾರೆ. ಹೀಗಾಗಿ 46,262 ಕೋಟಿ ಏರ್​ ಇಂಡಿಯಾ ಅಸ್ಸೆಟ್ಸ್​ ಹೋಲ್ಡಿಂಗ್ ಲಿಮಿಟೆಡ್(AIAHL)​ಗೆ ವರ್ಗಾವಣೆಯಾಗಲಿದೆ ಎನ್ನಲಾಗಿದೆ. ಒಂದು ವರದಿಯ ಪ್ರಕಾರ ಏರ್ ಇಂಡಿಯಾ 70,000 ಕೋಟಿಗಳನ್ನು ಕಳೆದುಕೊಂಡಿದೆ. ಈ ಮೂಲಕ ಸರ್ಕಾರ ಪ್ರತಿದಿನ 20 ಕೋಟಿಗಳನ್ನು ಕಳೆದುಕೊಳ್ಳುತ್ತಿತ್ತು ಎನ್ನಲಾಗಿದೆ.

- Advertisement -

Related news

error: Content is protected !!