Saturday, November 21, 2026
spot_imgspot_img
spot_imgspot_img

ತೇಜಸ್ ಯುದ್ಧ ವಿಮಾನ ಖರೀದಿಗೆ ಹೆಚ್ಎಎಲ್ ಜೊತೆ 48,000 ಕೋಟಿ ರೂ ಒಪ್ಪಂದಕ್ಕೆ ಸಹಿ!

- Advertisement -
- Advertisement -

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನ ಮೊದಲ ದಿನ ಹೆಚ್​ಎಎಲ್ ಸಂಸ್ಥೆಗೆ ಭರ್ಜರಿ ಒಪ್ಪಂದ ಸಿಕ್ಕಿದೆ. 83 ತೇಜಸ್ ಲೈಟ್ ಕಾಂಬಾಟ್ ಯುದ್ಧವಿಮಾನಗಳ ಖರೀದಿಗಾಗಿ ಹೆಚ್​ಎಎಲ್ ಜೊತೆ ಸರ್ಕಾರ 48,000 ಕೋಟಿ ರೂ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ ಹಾಕಿದೆ.

ಏರೋ ಇಂಡಿಯಾ ಶೋನ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಇಲಾಖೆ ಡಿಜಿ ವಿ ಎಲ್ ಕಾಂತರಾವ್ ಅವರು ಒಪ್ಪಂದವನ್ನ ಹೆಚ್​ಎಲ್​ನ ಛೇರ್ಮನ್ ಮತ್ತು ಎಂಡಿ ಆರ್ ಮಾಧವನ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು.

- Advertisement -

Related news

error: Content is protected !!