Friday, April 19, 2024
spot_imgspot_img
spot_imgspot_img

ಹಾಲಿನ ಡೈರಿಯೊಳಗೆ ಸ್ನಾನ ಮಾಡಿದ ನೌಕರ- ಇಬ್ಬರ ಬಂಧನ!!

- Advertisement -G L Acharya panikkar
- Advertisement -

ಟರ್ಕಿ: ವ್ಯಕ್ತಿಯೊಬ್ಬ ಹಾಲಿನ ಡೈರಿಯೊಳಗೆ ಸ್ನಾನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಡೈರಿಯಲ್ಲಿ ಕೆಲಸ ಮಾಡುತ್ತಿದ್ದ. ನೌಕರ ದೊಡ್ಡ ಹಾಲಿನ ಕಂಟೇನರ್​​​ನಲ್ಲಿ ಕುಳಿತು ಜಗ್​ನಿಂದ ಹಾಲನ್ನ ತಲೆ ಮೇಲೆ ಸುರಿದುಕೊಂಡು ಎಂಥಾ ಸ್ನಾನ ಅಂತ ಆನಂದಿಸುತ್ತಿದ್ದ.ಇದನ್ನು ಆತನ ಸಹೋದ್ಯೋಗಿಯೊಬ್ಬ ವಿಡಿಯೋ ಮಾಡಿ ಆನ್​ಲೈನ್​ನಲ್ಲಿ ಹರಿಬಿಟ್ಟಿದ್ದ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ನಾನ ಮಾಡಿದ ವ್ಯಕ್ತಿ ಹಾಗೂ ವಿಡಿಯೋ ಮಾಡಿದವನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ನಡೆದಿರೋದು ಟರ್ಕಿಯಲ್ಲಿ. ಇಲ್ಲಿನ ಕೋನ್ಯಾದ ಸೆಂಟ್ರಲ್ ಆಂಟೋಲಿಯನ್ ಪ್ರಾಂತ್ಯದಲ್ಲಿರೋ ಡೈರಿಯಲ್ಲಿ ನೌಕರ ಎಮ್ರಿ ಸಾಯರ್ ಎಂಬಾತ ಸ್ನಾನ ಮಾಡಿದ್ದಾನೆ. ಆತನೊಂದಿಗಿದ್ದ ಉಗುರ್​ ಟರ್ಗುಟ್​ ಇದನ್ನ ಚಿತ್ರೀಕರಿಸಿ ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದ. ಬಳಿಕ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ಹರಿದಾಡಿದ್ದು ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

- Advertisement -

Related news

error: Content is protected !!