


ಜೂನ್ 05 ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾಂಡೋವಿ ಮೋಟಾರ್ಸ್ ಹಂಪನ್ ಕಟ್ಟೆಯಲ್ಲಿ ಕಸ್ವಿ ಹಸಿರು ದಿಬ್ಬಣ ಸಂಸ್ಥೆಯ ನಿರ್ಮಾಣದಲ್ಲಿ ಹಾಗು ಡ್ರೀಮ್ ಪಿಕ್ಚರ್ಸ್ ಇದರ ಪ್ರಸ್ತುತಿಯ ಹರಿದ್ವರ್ಣ ಕನ್ನಡ ಕಿರುಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.


ತುಳು ಚಿತ್ರರಂಗ ಹಾಗೂ ರಂಗಭೂಮಿ ನಿರ್ದೇಶಕ ನಟ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ದೀಪ ಬೆಳಗಿಸಿ, ತುಳಸಿ ಗಿಡಕ್ಕೆ ನೀರು ಎರೆಯುುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹರಿದ್ವರ್ಣ ಕಿರುಚಿತ್ರದ ಟೀಸರ್ ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಪ್ರಸ್ತುತ ಸನ್ನಿವೇಶದಲ್ಲಿ ನಾವೆಲ್ಲ ಪರಿಸರಮಾಲಿನ್ಯದ ಭೀಕರತೆಯನ್ನು ಅರಿಯಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಸಿರನ್ನು ಉಳಿಸುವ ಹಾಗೂ ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಎಲ್ಲರಲ್ಲೂ ಪ್ರಕೃತಿಯ ಮಹತ್ವ ಹಾಗೂ ಅದರ ನಾಶದಿಂದ ಆಗುವ ಪರಿಣಾಮದ ಬಗ್ಗೆ ಚಿಂತನೆ ಮೂಡಬೇಕಿದೆ. ಈ ಕಾರ್ಯವನ್ನು ಕಸ್ವಿ ಹಸಿರು ದಿಬ್ಬಣ ಸಂಸ್ಥೆ ವಿಭಿನ್ನ ಯೋಜನೆ, ಯೋಚನೆಯ ಮೂಲಕ ಶ್ರಮಿಸುತ್ತಿದೆ ಎಂದು ಶ್ಲಾಘಿಸಿ ಕಿರುಚಿತ್ರಕ್ಕೆ ಶುಭಹಾರೈಸಿದರು.

ಪೋಸ್ಟರ್ ಬಿಡುಗಡೆ ಮಾಡಿದ ಜನಪದ ವಿದ್ವಾಂಸರು ದಯಾನಂದ ಕತ್ತಲ್ ಸರ್ ಮಾತನಾಡಿ ನಮ್ಮ ಆಚಾರ ವಿಚಾರ ಸಂಸ್ಕೃತಿ ಎಲ್ಲವೂ ಪರಿಸರದ ಮಡಿಲಿನಲ್ಲಿ ಇರುವಂತವು, ಪರಿಸರ ಉಳಿದರೆ ಈ ಎಲ್ಲವೂ ಮುಂದಿನ ಪೀಳಿಗೆಗೆ ಉಳಿಯುತ್ತದೆ ಹಾಗಾಗಿ ಪರಿಸರ ಸಂರಕ್ಷಣೆಯ ಜ್ಞಾನ ನಮ್ಮೆಲ್ಲರಲಿ ಮೂಡಬೇಕಿದೆ ಈ ನಿಟ್ಟಿನಲ್ಲಿ ಕಸ್ವಿ ಹಸಿರು ದಿಬ್ಬಣ ಅದ್ಭುತ ಕೆಲಸಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಂಡವಿ ಮೋಟಾರ್ಸ್ ನ ನೆರೆಂಕಿ ಪಾರ್ಶ್ವನಾಥ್ ಪರಿಸರದ ದಿನಾಚರಣೆ ಬಗ್ಗೆ ಮಾತನಾಡಿ ತಂಡಕ್ಕೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ತಿಮ್ಮಪ್ಪ ಕುಲಾಲ್,ಸಹ್ಯಾದ್ರಿ ನರ್ಸರಿ ಮಾಲಕರು ರಮೇಶ್ ಎಂ, ಮಾಂಡವಿ ಮೋಟಾರ್ಸ್ ನ AGM ಶ್ರೀ ಕಿಶನ್ ಶೆಟ್ಟಿ , ಹಾಗು ಹರಿದ್ವರ್ಣ ಕಿರುಚಿತ್ರದ ನಿರ್ದೇಶಕರು ಚೇತನ್ ಕೆ. ವಿಟ್ಲ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಕೇಶವ ರಾಮಕುಂಜ ಇವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಶ್ರದ್ಧಾ ರಾಮಕುಂಜ ವಂದಿಸಿದರು. ಹರಿದ್ವರ್ಣ ಕಿರುಚಿತ್ರದಲ್ಲಿ ಸುರೇಶ್ ಗೌಡ ಛಾಯಾಗ್ರಹಣ , ಸಹ ನಿರ್ದೇಶನ ಹಾಗೂ ಸಮಗ್ರ ನಿರ್ವಹಣೆ ಅಚಲ್ ವಿಟ್ಲ ಮಾಡಿರುತ್ತಾರೆ. ಬಾತು ಕುಲಾಲ್ ಇವರ ಸಂಕಲನ ಹಾಗೂ ಪೋಸ್ಟರ್ ಡಿಸೈನ್ ಚೇತನ್ ಆಚಾರ್ ಮಾಡಿರುತ್ತಾರೆ. ಮಾಸ್ಟರ್ ಸೃಜನ್ , ಮಾಸ್ಟರ್ ಪ್ರಜ್ವಲ್, ರಾಜೇಶ್ ನರಿಕೊಂಬು, ಮನೋಜ್ ಸೊರಕೆ ಹಾಗೂ ಮನ್ವಿತ ಉಪ್ಪಿನಂಗಡಿ ನಡೆಸಿದ್ದಾರೆ. ಅತೀ ಶೀಘ್ರದಲ್ಲಿ ಬಿಡುಗಡೆಗೆಯಾಗಲಿದೆ.