Sunday, June 14, 2026
spot_imgspot_img
spot_imgspot_img

ಭಾರೀ ಮಳೆ ಸಿಡಿಲಿನ ಹೊಡೆತಕ್ಕೆ ನೆಲಕ್ಕುರುಳಿದ ಐತಿಹಾಸಿಕ ಮೆಹೆತರ್ ಮಹಲ್‌

- Advertisement -
- Advertisement -

ಐತಿಹಾಸಿಕ ಮೆಹೆತರ್ ಮಹಲ್‌ಗೆ ಸಿಡಿಲು ಬಡಿದು ಮಹಲ್​ನ ಮಿನಾರ್ ನಿಂತಿದ್ದ ಕಾರಿನ ಮೇಲೆ ಬಿದ್ದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ವಿಜಯಪುರ ನಗರದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಈ ಹಿನ್ನಲೆ ನಗರದ ಜುಮ್ಮಾ ಮಸೀದ್ ರಸ್ತೆಯಲ್ಲಿರುವ ಆದಿಲ್ ಶಾಹಿ ಕಾಲದಲ್ಲಿ‌ ನಿರ್ಮಾಣಗೊಂಡ ಮೆಹೆತರ್ ಮಹಲ್‌ಗೆ ಸಿಡಿಲು ಬಡಿದಿದೆ.

ವಿಜಯಪುರ ಸೇರಿದಂತೆ ರಾಜ್ಯದ ಬಾಗಲಕೋಟೆ, ಹಾವೇರಿ, ಶಿವಮೊಗ್ಗ, ಗದಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇನ್ನು ವಿಜಯಪುರ ಜಿಲ್ಲೆಯ ಬಬಲೇಶ್ವರ ನಾಕಾ ರಸ್ತೆಯಲ್ಲಿ ಮಳೆಯ ಅಬ್ಬರಕ್ಕೆ ಬೃಹತ್ ಮರಗಳು ಧರೆಗುರುಳಿದಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.

ಇತ್ತ ಸಿಡಿಲು ಬಡಿದು ವಿಜಯಪುರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಐತಿಹಾಸಿಕ ಮೆಹೆತರ್ ಮಹಲ್‌ಗೆ ಹಾನಿಯಾಗಿದೆ. ಆದಿಲ್ ಶಾಹಿ ಕಾಲದಲ್ಲಿ‌ ನಿರ್ಮಿಸಲಾಗಿದ್ದ ಈ ಐತಿಹಾಸಿಕ ಮೆಹೆತರ್ ಮಹಲ್‌ನ ಮಿನಾರ್‌ಗೆ ಬಡಿದಿರುವ ಸಿಡಿಲ ಹೊಡೆತಕ್ಕೆ ಮಿನಾರ್ ತುಂಡಾಗಿ ಮೆಹರತ್ ಮೆಹಲ್ ಬಳಿ‌ ನಿಂತಿದ್ದ ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿದೆ.

- Advertisement -

Related news

error: Content is protected !!