Sunday, June 28, 2026
spot_imgspot_img
spot_imgspot_img

ಕಣ್ಣೂರು : ಕಾರಿಗೆ ಪೆಟ್ರೋಲ್ ತುಂಬಿಸಿ ಪೆಟ್ರೋಲ್ ಬಂಕ್ ನಲ್ಲಿ ಹಣ ಕೊಡದೇ ಪರಾರಿಯಾದ ಪೊಲೀಸ್ :

- Advertisement -
- Advertisement -

ಕಣ್ಣೂರು : ಕಾರಿಗೆ ಪೆಟ್ರೋಲ್ ತುಂಬಿಸಿಕೊಂಡ ನಂತರ ಹಣ ಕೊಡದೇ ತೆರಳುತ್ತಿದ್ದ ಪೊಲೀಸ್ ಡ್ರೈವರ್ ಬಳಿ ಪೆಟ್ರೋಲ್ ಪಂಪ್ ನೌಕರ ಹಣ ಪಾವತಿಸಲು ಹೇಳಿದಾಗ, ಏಕಾಏಕಿ ಚಲಾಯಿಸಿಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ನೌಕರ ಕಾರಿನ ಬಾನೆಟ್ ಹಿಡಿದುಕೊಂಡಿದ್ದು, ಆತನ ಕೊಲೆಗೆ ಯತ್ನಿಸಿರುವ ಘಟನೆ ಕಣ್ಣೂರಿನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪೊಲೀಸ್ ನನ್ನು ಬಂಧಿಸಿದ್ದು, ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಲೆ ಯತ್ನ ಪ್ರಕರಣದಡಿ ಬಂಧಿಸಿ, ವಿವಿಧ ಸೆಕ್ಷನ್ ಗಳನ್ನು ದಾಖಲಿಸಲಾಗಿದೆ ಎಂದು ಕಣ್ಣೂರು ನಗರ ಪೊಲೀಸ್ ಆಯುಕ್ತ ಅಜಿತ್ ಕುಮಾರ್‌ ತಿಳಿಸಿದ್ದಾರೆ

‍ ಸಂಜೆ ಹೊತ್ತಿಗೆ ಪೆಟ್ರೋಲ್ ಬಂಕ್ ಗೆ ಕಾರಿನಲ್ಲಿ ಆಗಮಿಸಿದ್ದ ಪೊಲೀಸ್ ಹಣ ನೀಡದೇ ತೆರಳುತ್ತಿದ್ದ ಸಂದರ್ಭದಲ್ಲಿ, ಆತನನ್ನು ಅಡ್ಡಗಟ್ಟಿದ ನೌಕರ ಅನಿಲ್ ಮೇಲೆ ಹಲ್ಲೆ ನಡೆಸಿದ್ದ. ಅಷ್ಟೇ ಅಲ್ಲ ಕಾರಿನ ಬಾನೆಟ್ ಮೇಲಿದ್ದ ನೌಕರನನ್ನು ಪೊಲೀಸ್ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಎಳೆದೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/i/status/1812861245726359658

- Advertisement -

Related news

error: Content is protected !!