



ಶ್ರೀ ಉಳ್ಳಾಲ್ತಿ ಬಿಲ್ಲುರಾಯರು ಮತ್ತು ಪರಿವಾರ ದೈವಗಳ ಮಾಡ ಮಾಡ್ತೇಲು ವಕ್ಕೆತ್ತೂರು ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 19ರಿಂದ ಮಾರ್ಚ್ 20ರವರೆಗೆ ನಡೆಯಲಿದೆ.
ಮಾರ್ಚ್ 20 ಶುಕ್ರವಾರದಂದು ಪೂರ್ವಾಹ್ನ 10.15ರಿಂದ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟು ಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಶ್ರೀ ಶ್ರೀ 1008 ನಿರ್ಮಲನಾಥಜೀ ಮಹಾರಾಜ್ , ಕದ್ರಿ ಶ್ರೀ ಯೋಗೇಶ್ವರ ಮಠದ ಪೀಠಾಧಿಪತಿ ಮಂಗಳೂರು, ಶ್ರೀ ಬಂಗಾರು ಅರಸರು ವಿಟ್ಲ ಅರಮನೆ, ಶ್ರೀ ಬ್ರಿಜೇಶ್ ಜೈನ್ ಮೊಗರ್ನಾಡು ಸೀಮೆ ದೇಜುಬಂಗ ವಂಶಸ್ಥರು ಬಾಳ್ತಿಲ ಬೂಡು ಇವರುಗಳ ಗೌರವ ಉಪಸ್ಥಿತಿಯಲ್ಲಿ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ.
ಮಾರ್ಚ್ 19 ಗುರುವಾರದಂದು ಸಂಜೆ ಗಂಟೆ 5 ರಿಂದ ದೇವತಾ ಪ್ರಾರ್ಥನೆ, ಶಿಲ್ಪಿ ಮೇಸ್ತ್ರಿಗಳಿಂದ ನೂತನ ಗುಡಿಗಳ ಪರಿಗ್ರಹ , ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ದಿ, ನೂತನ ಬಿಂಬ ಆಯುಧಗಳ ಜಲಾಧಿವಾಸ , ಧ್ಯಾನಧಿವಾಸ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ.
ಸಂಜೆ 6ರಿಂದ ಭಜನಾ ಸಂಕೀರ್ತನೆ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಮಾಮೇಶ್ವರ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಭಜನಾ ಮಂಡಳಿ ಕಾಮಟ, ರಾತ್ರಿ 9.30ಕ್ಕೆ ಅನ್ನಸಂತರ್ಪಣೆ
ಮಾರ್ಚ್ 20 ಶುಕ್ರವಾರದಂದು ಬೆಳಿಗ್ಗೆ 6.30ರಿಂದ ಮಹಾಗಣಪತಿ ಹೋಮ, ಸುಮುಹೂರ್ತಕ್ಕೆ ದೈವಗಳ ಪ್ರತಿಷ್ಠೆ , ಪ್ರತಿಷ್ಠಾ ಹೋಮ, ಕಲಶಾಭಿಷೇಕ, ತಂಬಿಲ ಸೇವೆ, ನಿತ್ಯ ನೈಮಿತ್ತಿಗಳ ನಿರ್ಣಯ, ಪ್ರಾರ್ಥನೆ , ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ







