Friday, June 26, 2026
spot_imgspot_img
spot_imgspot_img

ಅನುಮಾನಾಸ್ಪದ ರೀತಿಯಲ್ಲಿ ಮಲಯಾಳಂ ನಟ ಉನ್ನಿ ರಾಜನ್ ನ ಪತ್ನಿ ಸಾವು!

- Advertisement -
- Advertisement -

ತಿರುವನಂತಪುರಂ: ಮಲಯಾಳಂ ನಟ ಉನ್ನಿ ರಾಜನ್​ ಪಿ ದೇವ್​ ಪತ್ನಿ ಪ್ರಿಯಾಂಕಾ ಸಾವಿನ ಸುತ್ತ ಇದೀಗ ಅನುಮಾನದ ಹುತ್ತ ಬೆಳೆಯುತ್ತಿದೆ. ಕೌಟಂಬಿಕ ಕಲಹದಿಂದಾಗಿ ಆಕೆ ಬಲವಂತದಿಂದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಆಕೆಯ ಪಾಲಕರು ಆರೋಪಿಸಿದ್ದಾರೆ.

ನಟ ಉನ್ನಿ ರಾಜನ್​ ಪಿ ದೇವ್, ಹಿರಿಯ ನಟ​​ ದಿವಂಗತ ರಾಜನ್​ ಪಿ ದೇವ್​ ಕಿರಿಯ ಮಗ. ಬುಧವಾರ ಮಧ್ಯಾಹ್ನ ವೆಂಬಾಯಮ್​ ನಿವಾಸದಲ್ಲಿ ಪ್ರಿಯಾಂಕಾ ಶವವಾಗಿ ಪತ್ತೆಯಾಗಿದ್ದರು. ಇದಕ್ಕೂ ಒಂದು ದಿನ ಮುಂಚೆ ಪ್ರಿಯಾಂಕಾ ತನ್ನ ಗಂಡ ಉನ್ನಿ ರಾಜನ್​ ವಿರುದ್ಧ ವಟ್ಟಪ್ಪರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಆಕೆ ಮೃತಪಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಸಂಬಂಧಿ ರೇಷ್ಮಾ ಕೆಲವೊಂದು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ವರದಕ್ಷಿಣೆ ವಿಚಾರವಾಗಿ ಪ್ರಿಯಾಂಕಾ ಮೇಲೆ ಆಗಾಗ ಉನ್ನಿ ರಾಜನ್​ ಹಲ್ಲೆ ಮಾಡುತ್ತಿದ್ದನಂತೆ. ಆರಂಭದ ದಿನಗಳಲ್ಲಿ ಇದನ್ನು ತನ್ನ ಮನೆಯವರಿಂದ ಪ್ರಿಯಾಂಕಾ ಮುಚ್ಚಿಟ್ಟಿದ್ದರು. ಆದರೆ, ಯಾವಾಗ ಕಿರುಕುಳವನ್ನು ಸಹಿಸಲು ಸಾಧ್ಯವಾಗಲಿಲ್ಲವೋ ಆವಾಗ ಸ್ವತಃ ಆಕೆಯೇ ಹೋಗಿ ಠಾಣೆಯಲ್ಲಿ ದೂರು ನೀಡಿದ್ದಾಳೆಂದು ರೇಷ್ಮಾ ತಿಳಿಸಿದ್ದಾರೆ.

ಉನ್ನಿ ರಾಜನ್​ ಮತ್ತು ಪ್ರಿಯಾಂಕಾ ಪ್ರೀತಿಸುತ್ತಿದ್ದರು. ಹೊಸ ಜೀವನ ಆರಂಭಿಸಿದಾಗ ಅವರಿಬ್ಬರು ಸಂತೋಷವಾಗಿಯೇ ಇದ್ದರು. ಆದರೆ, ಉನ್ನಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರಿಯಾಂಕಾ ಆಭರಣಗಳನ್ನು ಮಾರಲು ಶುರು ಮಾಡಿದ. ಉನ್ನಿ ಒತ್ತಾಯದಂತೆ ಪ್ರಿಯಾಂಕಾ ತಾಯಿಯು ಸಹ ಅವನಿಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ರೇಷ್ಮಾ ಮಾಹಿತಿ ನೀಡಿದರು.

ಎಲ್ಲವನ್ನು ಮಾರಾಟ ಮಾಡಿದ ಬಳಿಕ ಪ್ರಿಯಾಂಕಾಳನ್ನು ಥಳಿಸಲು ಆರಂಭಿಸಿದ. ಅಲ್ಲದೆ, ಮನೆಯಿಂದ ಹೊರಗಾಕುತ್ತಿದ್ದ. ಕ್ರೂರವಾಗಿ ಹಲ್ಲೆ ಮಾಡುತ್ತಿದ್ದ. ಆದರೆ, ಎಲ್ಲವನ್ನು ಪ್ರಿಯಾಂಕಾ ಸಹಿಸಿಕೊಂಡಳು. ಆಕೆಯ ಬೆನ್ನ ಹಿಂದೆ ಕಚ್ಚಿದ ಗುರುತು ಮತ್ತು ಹಲ್ಲೆ ಮಾಡಿರುವ ಗುರುತುಗಳು ಸಹ ಇವೆ. ಅಲ್ಲದೆ, ಉನ್ನಿ ರಾಜನ್​ ಹಲ್ಲೆ ಮಾಡಿರುವ ಕೆಲವು ವಿಡಿಯೋಗಳನ್ನು ಆಕೆ ರೆಕಾರ್ಡ್​ ಮಾಡಿದ್ದಾಳೆಂದು ರೇಷ್ಮಾ ವಿವರಿಸಿದರು.

ವೆಂಬಾಯಮ್​ನಲ್ಲಿರುವ ತನ್ನ ಮನೆಗೆ ಮರಳಿದ ಬಳಿಕ ಪ್ರಿಯಾಂಕಾ, ಉನ್ನಿ ರಾಜನ್​ ವಿರುದ್ಧ ದೂರು ನೀಡಿದಳು. ಪ್ರಕರಣವನ್ನು ಮುಂದುವರಿಸುವ ಬಗ್ಗೆ ಗಟ್ಟಿ ನಿಲುವು ಹೊಂದಿದ್ದಳು. ಈ ಮಧ್ಯೆ ಅವಳಿಂದ ಒಂದು ಫೋನ್​ ಕಾಲ್​ ಸ್ವೀಕರಿಸಿದೆ. ಕರೆ ಸ್ವೀಕರಿಸಿದರೆ ಆಕೆ ಮೃತಪಟ್ಟಿದ್ದಾಳೆಂಬ ಸುದ್ದಿ ಬಂತು. ಉನ್ನಿ ರಾಜನ್​ಗೆ ಶಿಕ್ಷೆಯಾಗಲೇಬೇಕೆಂದು ರೇಷ್ಮಾ ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!