Saturday, April 20, 2024
spot_imgspot_img
spot_imgspot_img

ಟ್ಯೂನಿಷಿಯಾ ಸಮುದ್ರದಲ್ಲಿ ಮುಳುಗಿದ ಹಡಗು; ಇಟಲಿಗೆ ಬರುತ್ತಿದ್ದ ಆಫ್ರಿಕನ್ ವಲಸಿಗರು ದುರ್ಮರಣ

- Advertisement -G L Acharya panikkar
- Advertisement -


ಟ್ಯುನಿಷಿಯಾ: 93 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಂಗಳವಾರ ಮುಂಜಾನೆ ಟ್ಯೂನಿಷಿಯಾ ಸಮುದ್ರದಲ್ಲಿ ಮುಳುಗಿದ್ದು, ಹಲವು ಮಕ್ಕಳು ಸೇರಿದಂತೆ 39 ಆಫ್ರಿಕನ್ ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ದಕ್ಷಿಣ ಟ್ಯುನಿಷಿಯಾದ ಮೆಡಿಟರೇನಿಯನ್ ಬಂದರು ನಗರ ಸ್ಫಾಕ್ಸ್ ನ ಸಮುದ್ರಪ್ರದೇಶದಲ್ಲಿ ಅವರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಟ್ಯುನಿಷಿಯಾದ ರಾಷ್ಟ್ರೀಯ ರಕ್ಷಣಾ ಪಡೆಯ ವಕ್ತಾರ ಹೂಸ್ಮೆಡಿನ್ ಜೆಬಬ್ಲಿ ಅವರು ತಿಳಿಸಿದ್ದಾರೆ.

ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯ ತಂಡಗಳು ಮತ್ತು ಸ್ವಯಂ ಪ್ರೇರಿತ ಮೀನುಗಾರಿಕಾ ದೋಣಿಗಳು 39 ಮೃತದೇಹಗಳನ್ನು ಪತ್ತೆ ಹಚ್ಚಿ, ಎರಡೂ ಹಡಗುಗಳಿಂದ ಒಟ್ಟು 165 ವಲಸಿಗರನ್ನು ರಕ್ಷಿಸಿವೆ ಎಂದು ಟ್ಯುನಿಷಿಯಾದ ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಸಂತ್ರಸ್ತರನ್ನು ಆಡಳಿತಾತ್ಮಕ ವಿಚಾರಣೆಗಾಗಿ ಸ್ಫ್ಯಾಕ್ಸ್ ಮೀನುಗಾರಿಕಾ ಬಂದರಿಗೆ ಕರೆದೊಯ್ಯಲಾಯಿತು, ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಲಸಿಗರು ಉಪ-ಸಹಾರಾ ಆಫ್ರಿಕನ್ ದೇಶಗಳಿಂದ ಬಂದವರು, ಮತ್ತು ದೋಣಿಗಳು ಇಟಲಿಗೆ ತೆರಳುತ್ತಿದ್ದವು ಎಂದು ಜೆಬಬ್ಲಿ ಹೇಳಿದರು. ವಲಸಿಗರು ಎರವಲು ಪಡೆದ ದೋಣಿಗಳು ಶಿಥಿಲಾವಸ್ಥೆಯಲ್ಲಿದ್ದು, ಓವರ್ ಲೋಡ್ ಆಗಿರುವುದೇ ಅಪಘಾತಗಳಿಗೆ ಕಾರಣ ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!