- Advertisement -
- Advertisement -
ಉಡುಪಿ: ಆಕಸ್ಮಿಕವಾಗಿ ಮನೆಯ ಬಾವಿಗೆ ಬಿದ್ದ ವೃದ್ದೆಯೋರ್ವರನ್ನು ಉಡುಪಿ ನಗರ ಠಾಣೆಯ ಪಿಎಸ್ಐ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಆಟೋ ಚಾಲಕರು ಸೇರಿ ಸುರಕ್ಷಿತವಾಗಿ ಮೆಲಕ್ಕೆತ್ತಿದ ಘಟನೆ ತಾಲೂಕಿನ ಘಟನೆಯು ಕುಕ್ಕಿಕಟ್ಟೆ ಮಾರ್ಪಳ್ಳಿಯಲ್ಲಿ ಗುರುವಾರ ನಡೆದಿದೆ.
ಪಡೆದ ಉಡುಪಿ ನಗರ ಠಾಣೆಯ ಪಿಎಸ್ಐ ಸದಾಶಿವ ಗವರೋಜಿ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳಿಯ ಆಟೋ ಚಾಲಕ ರಾಜೇಶ್ ನಾಯಕ್ ಅವರು ಬಾವಿಗಿಳಿದು ವೃದ್ಧೆಯನ್ನು ರಕ್ಷಿಸಿದರು. ಸದ್ಯ ವೃದ್ಧ ಮಹಿಳೆ ಆರೋಗ್ಯವಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗಿಳಿಯಲು ಸಿದ್ಧತೆ ಮಾಡುತ್ತಿದ್ದರು. ಎಸ್ ಐ ಸದಾಶಿವ, ವಿನಾಯಕ್ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದರು. ವೃದ್ಧೆಗೆ ಹಗ್ಗ ಕಟ್ಟಿ ಮೇಲೆಳೆಯಲಾಯ್ತು. ಅಜ್ಜಿ ಆರೋಗ್ಯವಾಗಿದ್ದಾರೆ.
- Advertisement -