Saturday, April 20, 2024
spot_imgspot_img
spot_imgspot_img

ಉಡುಪಿ: ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ಯತ್ನ; ಆರೋಪಿಯನ್ನು ಬಂಧಿಸಿದ ಪೊಲೀಸರು!

- Advertisement -G L Acharya panikkar
- Advertisement -

ಉಡುಪಿ: ಉಡುಪಿ-ಅಂಬಾಗಿಲು ಮುಖ್ಯರಸ್ತೆಯಲ್ಲಿರುವ ತಾಂಗದಗಡಿ ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ಏ.16 ರಂದು ವಿಫಲ ಯತ್ನ ನಡೆಸಿದ ಆರೋಪಿಯನ್ನು ಪೊಲೀಸರು ಮಂಗಳೂರಿನ ಮೂಡುಶೆಡ್ಡೆ ಗ್ಯಾಸ್ ಗೋಡನ್ ಬಳಿ ಬಂಧಿಸಿದ್ದಾರೆ.

ಬಂಧಿತನನ್ನು ಮಂಗಳೂರಿನಲ್ಲಿ ವಾಸವಿರುವ ರಾಂಚಿ ಮೂಲದ ಆರ್ಶಿತ್ ಅವಿನಾಸ್ ಡೋಡ್ರೆ(18) ಎಂದು ಗುರುತಿಸಲಾಗಿದೆ. ಈತ ವಿಚಾರಣೆ ವೇಳೆ ತನ್ನ ಪ್ರಿಯತಮೆಯೊಂದಿಗೆ ಸುತ್ತಾಟ ನಡೆಸಲು, ಈಕೆಗೆ ಉಡುಗೊರೆ ನೀಡಲು ಹಣದ ಅವಶ್ಯಕತೆ ಇದ್ದ ಕಾರಣ ಈ ಕಳ್ಳತನ ಪ್ರಯತ್ನ ಮಾಡಿರುವುದಾಗಿ ಆರೋಪಿ ಹೇಳಿದ್ದು, ಇದಲ್ಲದೆ ಈತ ಈ ಹಿಂದೆಯೂ ಸಣ್ಣ ಪುಟ್ಟ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

driving

ಏ.16ರಂದು ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ಯತ್ನಿಸುತ್ತಿರುವಾಗ ಸ್ಥಳೀಯರು ಎಚ್ಚರವಾಗಿ ಆತನನ್ನು ಹಿಡಿಯಲು ಪ್ರಯತ್ನಿಸಿದ್ದರು. ಈ ಸಂದರ್ಭ ಆತ ಬಂದಿದ್ದ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಕಾರಿನ ಜಾಡು ಹಿಡಿದು ಹೋದ ಪೊಲೀಸರು ಕಾರಿನ ಆರ್.ಸಿ ಮಾಲೀಕ ಸೌರಭ್ ಜೈನ್ ಅವರನ್ನು ವಿಚಾರಿಸಿದಾಗ ಅವರು ಪ್ರೀತಂ ಅವರ ಕಾರ್ ಲಿಂಕ್ಸ್ ಗೆ ತನ್ನ ಕಾರನ್ನು ಬಾಡಿಗೆಗೆ ನೀಡಿದ ವಿಚಾರವನ್ನು ತಿಳಿಸಿದ್ದರು.

ಪ್ರೀತಂ ಅವರಿಂದ ಕಾರು ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!