Thursday, June 4, 2026
spot_imgspot_img
spot_imgspot_img

ಉಳ್ಳಾಲ: SPORTS WINNER ಅಂಗಡಿ ಹಾಗೂ ಮಹಾದೇವ್ ಸ್ಪೋಟ್ಸ್‌ ಸೆಂಟರ್‌ಗೆ ಪೊಲೀಸ್‌ ದಾಳಿ; 300 ನಕಲಿ ವಾಲಿಬಾಲ್‍, ಫುಟ್‍‌ಬಾಲ್‍ ಹಾಗೂ ಬ್ಯಾಡ್ಮಿಂಟನ್ ರಾಕೆಟ್‍ಗಳು ವಶಕ್ಕೆ

- Advertisement -
- Advertisement -

ಉಳ್ಳಾಲ: COSCO, NIVIA & YONEX ಬ್ರಾಂಡ್ ಹೆಸರಿನಲ್ಲಿ ನಕಲಿ ಫುಟ್ ಬಾಲ್‍, ವಾಲಿಬಾಲ್‌ ಹಾಗೂ ಬ್ಯಾಡ್ಮಿಂಟನ್ ರಾಕೆಟ್‍ಗಳ ಮಾರಾಟ ಮಾಡುತ್ತಿರು ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್‌ ದಾಳಿ ನಡೆಸಿ 300 ನಕಲಿ ಐಟಂಗಳನ್ನು ವಶಪಡಿಸಿಕೊಂಡಿದ್ದಾರೆ.

Brand Protectors India Pvt. Ltd ನ South India regional head ಸ್ಟೀಫನ್ ರಾಜ್‍ರವರ ದೂರಿನ ಪ್ರಕಾರ ಉಳ್ಳಾಲ ಠಾಣಾ ವ್ಯಾಪ್ತಿಯ SPORTS WINNER ಅಂಗಡಿ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವ್ ಸ್ಪೋಟ್ಸ್‌‌ ಸೆಂಟರ್‍ ನಲ್ಲಿ COSCO, NIVIA & YONEX ಬ್ರಾಂಡ್ ಎಂದು ಹಾಕಿರುವ ನಕಲಿ ಫುಟ್ ಬಾಲ್‍ಗಳು, ವಾಲಿಬಾಲ್‌ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್‍ಗಳು ಮಾರಾಟವಾಗುತ್ತಿರುವ ಬಗ್ಗೆ ದೂರು ನೀಡಿದ ಮೇರೆಗೆ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 140/2025, ಕಲಂ: 51(1)(b), 63, Copyright Act 1957 ಮತ್ತು ಮಂಗಳೂರು ಉತ್ತರ ಠಾಣೆಯಲ್ಲಿ 95/2025 ಕಲಂ: 51(1)(b), 63, Copyright Act 1957 ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಆ.18 ರಂದು ಮತ್ತು ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯಲ್ಲಿ ಆ.19 ರಂದು ದಾಳಿ ಮಾಡಿದ್ದು, ದಾಳಿ ವೇಳೆ ಸುಮಾರು 300 ನಕಲಿ ವಾಲಿಬಾಲ್‍ಗಳು, ಫುಟ್‍‌ಬಾಲ್‍ಗಳು ಹಾಗೂ ಬ್ಯಾಡ್ಮಿಂಟನ್ ರಾಕೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!