Sunday, June 14, 2026
spot_imgspot_img
spot_imgspot_img

ಉಳ್ಳಾಲ: ನೇಣು ಬಿಗಿದು ಯುವಕ ಆತ್ಮಹತ್ಯೆ!

- Advertisement -
- Advertisement -

ಉಳ್ಳಾಲ: ಯುವಕನೊಬ್ಬ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕ ಚೆಂಬುಗುಡ್ಡೆ ನಿವಾಸಿ ದೀಪಕ್ ಶೆಟ್ಟಿ (31). ಈತ ಬಾರ್ ಬೆಂಡರ್‌ ವೃತ್ತಿ ನಡೆಸುತ್ತಿದ್ದನು.

ಮೃತ ಯುವಕ ದೀಪಕ್ ಕಳೆದ ಕೆಲ ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದನು. ತಾಯಿ ಕೆಲಸಕ್ಕೆಂದು ಹೋಗಿದ್ದ ವೇಳೆ ಪಕ್ಕದ ಮನೆಯಲ್ಲಿ ಬಾಡಿಗೆ ವಾಸವಿರುವ ಸಹೋದರಿ ದೇವರಿಗೆ ದೀಪ ಇಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ದೀಪಕ್ ಸ್ಥಳೀಯ ಕೊರಗಜ್ಜ ಸೇವಾ ಸಮಿತಿಯಲ್ಲದೆ ಹಲವಾರು ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ ದೀಪಕ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!