Saturday, September 26, 2026
spot_imgspot_img
spot_imgspot_img

ಉಳ್ಳಾಲ: ಬೇಕರಿಗೆ ಸ್ವೀಟ್ ಖರೀದಿಗೆಂದು ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಸ್ವೀಟ್ಸ್ ಮಾಲಕನ ಪುತ್ರ ಉಸ್ಮಾನ್ ಪೊಲೀಸ್ ವಶಕ್ಕೆ

- Advertisement -
- Advertisement -
driving

ಉಳ್ಳಾಲ: ಬೇಕರಿ ಅಂಗಡಿಗೆ ಖರೀದಿಗೆ ತೆರಳಿದ್ದ 13 ವರ್ಷದ ಬಾಲಕಿಯನ್ನು ಒಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೊಣಾಜೆ ಸೂಪರ್ ಸ್ಟೋರ್ಸ್ & ಸ್ವೀಟ್ಸ್ ಮಾಲಕನ ಪುತ್ರನನ್ನ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಣಾಜೆ ಸೂಪರ್ ಸ್ಟೋರ್ಸ್ & ಸ್ವೀಟ್ಸ್ ನ ಮಾಲಕನ ಪುತ್ರ ಉಸ್ಮಾನ್ (33) ಬಂಧಿತ ಯುವಕ. ಇಂದು ಸಂಜೆ 13 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಕೊಣಾಜೆ ಜಂಕ್ಷನ್ ನಲ್ಲಿರುವ ಕೊಣಾಜೆ ಸೂಪರ್ ಸ್ಟೋರ್ಸ್ & ಸ್ವೀಟ್ಸ್ ಬಝಾರ್ ಗೆ ತೆರಳಿದ್ದು ಈ ವೇಳೆ ಆರೋಪಿ ಉಸ್ಮಾನ್ ಬಾಲಕಿಯನ್ನ ಪುಸಲಾಯಿಸಿ ಒಳಗೆ ಕರೆದೊಯ್ದಿದ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇದರಿಂದ ಬೆದರಿದ ಬಾಲಕಿ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು ತಾಯಿಯಲ್ಲಿ ವಿಚಾರ ತಿಳಿಸಿದ್ದಾಳೆ.

ವಿಚಾರ ತಿಳಿದ ಬಜರಂಗದಳ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿ ಉಸ್ಮಾನ್ ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಿಂದ ಕೊಣಾಜೆ ಠಾಣೆಯಲ್ಲಿ ಎರಡು ಕೋಮಿನ ಜನರು ಸೇರಿದ್ದು ಬಿಗುವಿನ ವಾತಾವರಣ ಉಂಟಾಗಿದೆ.

- Advertisement -

Related news

error: Content is protected !!