Wednesday, June 17, 2026
spot_imgspot_img
spot_imgspot_img

ಅಕ್ರಮ ಜಾನುವಾರು ಸಾಗಾಟ- ವಾಹನ ಮತ್ತು ಜಾನುವಾರು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಉಳ್ಳಾಲ(ನ.12): ಮಂಗಳೂರಿನಿಂದ ಕೇರಳದ ಕಡೆಗೆ ಆರು ಜಾನುವಾರುಗಳನ್ನು (5 ಹೋರಿ ಒಂದು ಹಸು) ಸಾಗಾಟ ಮಾಡುತ್ತಿದ್ದ ಈಚರ್ ವಾಹನವನ್ನು ತೊಕ್ಕೊಟ್ಟಿನ ಕಾಪಿಕಾಡು ಹೆದ್ದಾರಿಯಲ್ಲಿ ಸ್ಥಳೀಯ ಯುವಕರು ಅಡ್ಡಗಟ್ಟಿ ನಿಲ್ಲಿಸಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ವಾಹನ ಮತ್ತು ಜಾನುವಾರುಗಳನ್ನ ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ನೋಂದಣಿಯ ವಾಹನವಾಗಿದ್ದು ಚಾಲಕನು ವಾಹನ ಮತ್ತು ಜಾನುವಾರುಗಳನ್ನು ಹುಬ್ಬಳ್ಳಿಯ ಕೋರ್ಟಿಂದ ಬಿಡುಗಡೆಗೊಳಿಸಿರುವುದಾಗಿ ದಾಖಲೆ ತೋರಿಸಿದ್ದಾನೆ. ಉಳ್ಳಾಲ ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜಾನುವಾರು ಸಾಗಾಟದ ಬಗ್ಗೆ ಸ್ಥಳೀಯರು ಅನುಮಾನ ಪಟ್ಟಿದ್ದು ಸ್ಥಳದಲ್ಲಿ ಕೆಲ ಕಾಲ ಜನ ಜಮಾವಣೆಗೊಂಡು ಪೊಲೀಸರು ಜನರನ್ನು ಚದುರಿಸಿದ್ದಾರೆ. ಉಳ್ಳಾಲ ಪೊಲೀಸರ ವಿಚಾರಣೆಯಲ್ಲಿ ಸತ್ಯಾಂಶ ಹೊರಬರಲಿದೆ.

- Advertisement -

Related news

error: Content is protected !!