Sunday, April 28, 2024
spot_imgspot_img
spot_imgspot_img

ಮೂಡುಬಿದಿರೆ: ಶಾಸಕರು ಏರ್ಪಡಿಸಿದ್ದ ಬಾಡೂಟಕ್ಕೆ ಪೊಲೀಸ್ ದಾಳಿ ; ಎಸ್ಕೇಪ್ ಆಗುವ ಬರದಲ್ಲಿ ಶಾಸಕರ ಬೆಂಬಲಿಗರಿದ್ದ ವಾಹನ ಅಪಘಾತ – ಪಾದಾಚಾರಿ ಗಂಭೀರ

- Advertisement -G L Acharya panikkar
- Advertisement -

ಮೂಡುಬಿದಿರೆ: ನಿನ್ನೆ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ರವರ ಬೆಂಬಲಿಗರು ಕಡ್ಲಕೆರೆ ಎಂಬಲ್ಲಿ ಆಯೋಜನೆ ಮಾಡಿದ್ದ ಬಾಡೂಟಕ್ಕೆ ಎಲೆಕ್ಷನ್ ಕಮಿಷನ್ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ಮತ್ತವರ ಬೆಂಬಲಿಗರು ಪರಾರಿಯಾಗಿರುವ ಬರದಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಹೋಗಿ ಮೂಡುಬಿದಿರೆ ಪೇಟೆಯ ಮಧ್ಯದಲ್ಲಿ ರಸ್ತೆ ದಾಟುತ್ತಿದ್ದ ಕೃಷ್ಣಯ್ಯ ಆಚಾರ್ಯ ಎಂಬವರಿಗೆ ಶಾಸಕರ ಸೋಶಿಯಲ್ ಮೀಡಿಯಾ ಟೀಮ್ ಇದ್ದ ಇನೋವಾ ಕಾರು ಡಿಕ್ಕಿ ಹೊಡೆದಿತ್ತು.

ತರಾತುರಿಯಲ್ಲಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಅಲ್ಲಿಂದ ತಮಗೂ ಈ ಘಟನೆಗೂ ಸಂಬಂಧವಿಲ್ಲದಂತೆ ಶಾಸಕರ ಬೆಂಬಲಿಗರು ವರ್ತಿಸಿದ್ದರು. ಆದರೆ ನಿನ್ನೆ ರಾತ್ರಿಯಿಂದ ಗಾಯಾಳುವಿನ ಪರಿಸ್ಥಿತಿ ಗಂಭೀರವಾಗಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಕೃಷ್ಣಯ್ಯ ಆಚಾರ್ಯ ಅವರು ಕೋಮಾಗೆ ಜಾರಿದ್ದಾರೆ ಎನ್ನುವ ಮಾಹಿತಿ ಕೆಲ ಮೂಲಗಳಿಂದ ತಿಳಿದುಬಂದಿದೆ.

ಗಾಯಾಳು ಮಂಗಳೂರಿಗೆ ಶಿಫ್ಟ್
ಪ್ರಸ್ತುತ ಮೂಡುಬಿದ್ರೆಯ ಆಸ್ಪತ್ರೆಯಲ್ಲಿದ್ದ ಗಾಯಾಳು ಪರಿಸ್ಥಿತಿ ಗಂಭೀರವಾಗಿದೆ. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಬ್ಲೀಡಿಂಗ್ ಕೂಡ ಹೆಚ್ಚಾಗಿರುವುದರಿಂದ ಮಂಗಳೂರಿನ ಆಸ್ಪತ್ರೆಗೆ ಗಾಯಾಳುವನ್ನು ರವಾನಿಸಲಾಗಿದೆ.

ಶಾಸಕ ಕೋಟ್ಯಾನ್ ನಿರ್ಲಕ್ಷ್ಯ
ಅಪಘಾತ ನಡೆದ ಸಂದರ್ಭದಲ್ಲಿ ಸ್ವಲ್ಪವೇ ದೂರದಲ್ಲಿದ್ದ ಶಾಸಕ ಉಮಾನಾಥ ಕೋಟ್ಯಾನ್ ಗಾಯಾಳು ಆಸ್ಪತ್ರೆ ಸೇರಿದ ನಂತರವೂ ಕೂಡ ಯಾವುದೇ ರೀತಿಯ ನೆರವು ನೀಡದೆ ಆಸ್ಪತ್ರೆಗೂ ಬಾರದೆ ಕನಿಷ್ಠ ಪಕ್ಷ ಗಾಯಾಳುವಿನ ಆರೋಗ್ಯ ಪರಿಸ್ಥಿತಿಯನ್ನು ಕೂಡ ವಿಚಾರಿಸಿಲ್ಲ ಎನ್ನುವುದು ಸದ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸಂದೇಹಾಸ್ಪದ ಕಾರು
KA 19 MH 0634 ಟೂರಿಸ್ಟ್ ಪರವಾನಿಗೆ ಹೊಂದಿದ್ದ ಇನ್ನೋವಾ ಕಾರು ಅಪಘಾತ ಸಂದರ್ಭದಲ್ಲಿ ಖಾಸಗಿ ವಾಹನದ ನೋಂದಣಿ ಪ್ಲೇಟ್ ಹೊಂದಿತ್ತು. ಆಸ್ಪತ್ರೆಗೆ ಗಾಯಾಳುವನ್ನು ಸೇರಿಸಿದ ನಂತರ ಆ ಕಾರು ಹಳದಿ ನಂಬರ್ ಪ್ಲೇಟ್ ಬದಲಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

READ THIS TOO: ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಜನನಾಂಗವನ್ನೇ ಕತ್ತರಿಸಿದ ಮಹಿಳೆ..!

- Advertisement -

Related news

error: Content is protected !!