Thursday, April 25, 2024
spot_imgspot_img
spot_imgspot_img

ರಾಜ್ಯದ 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ದ.ಕ ಜಿಲ್ಲೆಯ ವಿಟ್ಲ, ಬಂಟ್ವಾಳ ನಗರ ಠಾಣೆ ಮೇಲ್ದರ್ಜೆಗೆ

- Advertisement -G L Acharya panikkar
- Advertisement -

ಬೆಂಗಳೂರು: ಕಾನೂನು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧಕ ಪ್ರಕರಣಗಳ ಪರಿಣಾಮಕಾರಿ ತನಿಖೆ ದೃಷ್ಟಿಯಿಂದ ರಾಜ್ಯದ 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮೇಲ್ದರ್ಜೆಗೇರಿಸು ವ ಕುರಿತು ಸೆ.14ರ ಮಧ್ಯಾಹ್ನ 12 ಗಂಟೆಯೊಳಗೆ ಡಿಜಿಪಿ ಕೇಂದ್ರ ಕಚೇರಿಗೆ ಅಭಿಪ್ರಾಯ ಕಳಿಸುವಂತೆ ಎಲ್ಲ ಜಿಲ್ಲಾ ಎಸ್​ಪಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದು, ಅಭಿಪ್ರಾಯ ಸ್ವೀಕೃತವಾದ ಬಳಿಕ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಶುರುವಾಗಲಿದೆ.

ಮೇಲ್ದರ್ಜೆಗೇರಿಸಲು ಆಯ್ಕೆಯಾಗಿರುವ ಪೊಲೀಸ್ ಠಾಣೆಗಳಲ್ಲಿ ಸದ್ಯ ಸಬ್ ಇನ್​ಸ್ಪೆಕ್ಟರ್​ಗಳ ಉಸ್ತುವಾರಿ ಇದೆ. ಸರ್ಕಲ್ ಇನ್​ಸ್ಪೆಕ್ಟರ್​ಗಳ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇನ್​ಸ್ಪೆಕ್ಟರ್​ಗಳ ಅನುಮತಿ ಇಲ್ಲದೆ ಅಥವಾ ಅವರ ಗಮನಕ್ಕೆ ತರದೆ ನೇರವಾಗಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಬ್ ಇನ್​ಸ್ಪೆಕ್ಟ್​ಗಳಿಗೆ ಅಧಿಕಾರವಿಲ್ಲ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ನಿರ್ವಹಣೆ ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಇನ್​ಸ್ಪೆಕ್ಟರ್​ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಪಿಎಸ್​ಐ ಠಾಣಾಧಿಕಾರಿಗಳಿರುವ ಠಾಣೆಗಳಲ್ಲಿ ಪೊಲೀಸ್ ಇನ್​ಸ್ಪೆಕ್ಟರ್​ಗಳನ್ನು ಠಾಣಾಧಿಕಾರಿಗಳನ್ನಾಗಿಸಿ ಮೇಲ್ದರ್ಜೆಗೇರಿಸಲು ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಹಾವೇರಿ ಹಾಗೂ ಶಿವಮೊಗ್ಗ ಸೇರಿದಂತೆ 16 ಜಿಲ್ಲೆಗಳ 56 ಪೊಲೀಸ್ ಠಾಣೆ ಗಳನ್ನು ಗುರುತಿಸಲಾಗಿದೆ ಎಂದು ಎಡಿಜಿಪಿ ಡಾ. ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ.

ಯಾವ್ಯಾವ ಠಾಣೆ ಮೇಲ್ದರ್ಜೆಗೆ?
ಚಿಕ್ಕಬಳ್ಳಾಪುರ

ಚಿಂತಾಮಣಿ ಗ್ರಾಮಾಂತರ ಠಾಣೆ
ಬಾಗೇಪಲ್ಲಿ ಪೊಲೀಸ್ ಠಾಣೆ

ಹಾಸನ

ಹಾಸನ ನಗರ ಠಾಣೆ
ಹಾಸನ ಎಕ್ಸ್​ಟೆನ್ಷನ್ ಠಾಣೆ
ಹಾಸನ ಗ್ರಾಮಾಂತರ ಠಾಣೆ
ಬೇಲೂರು ಠಾಣೆ
ಚನ್ನರಾಯಪಟ್ಟಣ ವೃತ್ತ ಠಾಣೆ
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ

ಚಾಮರಾಜನಗರ

ಚಾಮರಾಜನಗರ ಗ್ರಾಮಾಂತರ ಠಾಣೆ
ಚಾಮರಾಜನಗರ ಪೂರ್ವ ಠಾಣೆ
ಗುಂಡ್ಲುಪೇಟೆ ಠಾಣೆ

ಮಂಡ್ಯ

ಮಂಡ್ಯ ಪಶ್ಚಿಮ ಠಾಣೆ
ಮಂಡ್ಯ ಗ್ರಾಮಾಂತರ ಠಾಣೆ
ಕೆ.ಆರ್.ಪೇಟೆ ಠಾಣೆ
ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ
ಕಿಕ್ಕೇರಿ ಠಾಣೆ
ಮಳವಳ್ಳಿ ಗ್ರಾಮಾಂತರ ಠಾಣೆ
ಕೆ.ಎಂ.ದೊಡ್ಡಿ ಠಾಣೆ
ಮದ್ದೂರು ಠಾಣೆ
ಶ್ರೀರಂಗಪಟ್ಟಣ ನಗರ ಠಾಣೆ
ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ
ಕೆ.ಆರ್.ಎಸ್ ಠಾಣೆ
ಪಾಂಡವಪುರ ಠಾಣೆ
ಮೇಲುಕೋಟೆ ಠಾಣೆ

ಹಾವೇರಿ

ರಾಣೇಬೆನ್ನೂರು ಗ್ರಾಮಾಂತರ ಠಾಣೆ

ಶಿವಮೊಗ್ಗ

ದೊಡ್ಡಪೇಟೆ ಠಾಣೆ
ವಿನೋಬನಗರ ಠಾಣೆ
ಶಿವಮೊಗ್ಗ ಗ್ರಾಮಾಂತರ ಠಾಣೆ
ತುಂಗಾನಗರ ಠಾಣೆ
ಕುಂಸಿ ಠಾಣೆ
ಭದ್ರಾವತಿ ಗ್ರಾಮಾಂತರ ಠಾಣೆ
ಹೊಣೆಬೆನ್ನೂರು ಠಾಣೆ
ತೀರ್ಥಹಳ್ಳಿ ಠಾಣೆ
ಸಾಗರ ಗ್ರಾಮಾಂತರ ಠಾಣೆ
ಶಿಕಾರಿಪುರ ಗ್ರಾಮಾಂತರ ಠಾಣೆ

ದಕ್ಷಿಣ ಕನ್ನಡ

ಬಂಟ್ವಾಳ ನಗರ ಠಾಣೆ
ವಿಟ್ಲ ಠಾಣೆ

ಚಿಕ್ಕಮಗಳೂರು

ಚಿಕ್ಕಮಗಳೂರು ನಗರ ಠಾಣೆ
ಚಿಕ್ಕಮಗಳೂರು ಗ್ರಾಮಾಂತರ ಠಾಣೆ
ಅಜ್ಜಂಪುರ ಠಾಣೆ

ಉಡುಪಿ

ಉಡುಪಿ ನಗರ ಠಾಣೆ

ಉತ್ತರ ಕನ್ನಡ

ಕಾರವಾರ ನಗರ ಠಾಣೆ
ಕುಮಟ ಠಾಣೆ
ಹೊನ್ನಾವರ ಠಾಣೆ
ಭಟ್ಕಳ ಠಾಣೆ

ಬಾಗಲಕೋಟೆ

ಬಾಗಲಕೋಟೆ ನಗರ ಠಾಣೆ

ಗದಗ

ಗದಗ ನಗರ ಠಾಣೆ
ಗದಗ ಗ್ರಾಮಾಂತರ ಠಾಣೆ

ಧಾರವಾಡ

ಧಾರವಾಡ ಗ್ರಾಮಾಂತರ ಠಾಣೆ

ವಿಜಯಪುರ

ಗಾಂಧಿಚೌಕ್ ಠಾಣೆ
ಇಂಡಿನಗರ ಠಾಣೆ
ಬಸವನ ಬಾಗೇವಾಡಿ ಠಾಣೆ

ಬಳ್ಳಾರಿ

ಬಳ್ಳಾರಿ ಗ್ರಾಮಾಂತರ ಠಾಣೆ
ಹರಪನಹಳ್ಳಿ ಠಾಣೆ

ಕೊಪ್ಪಳ

ಗಂಗಾವತಿ ಠಾಣೆ
ಕಾರಟಗಿ

(ಹೊಸ ಪೊಲೀಸ್ ವೃತ್ತ ಠಾಣೆಗಳು)

ಮಂಡ್ಯ

ಕೆ.ಆರ್.ಎಸ್ ವೃತ್ತ (ಕೆ.ಆರ್.ಎಸ್ ಮತ್ತು ಅರಕೆರೆ ಪೊಲೀಸ್ ಠಾಣೆ)

ಉತ್ತರ ಕನ್ನಡ

ಅಂಕೋಲ ವೃತ್ತ (ಅಂಕೋಲ ಮತ್ತು ಗೋಕರ್ಣ ಠಾಣೆ)

ಶಿವಮೊಗ್ಗ

ಭದ್ರಾವತಿ ನ್ಯೂಟೌನ್ ವೃತ್ತ (ಭದ್ರಾವತಿ ನ್ಯೂಟೌನ್, ಪೇಪರ್​ಟೌನ್, ಭದ್ರಾವತಿ ಸಂಚಾರ ಠಾಣೆ)

- Advertisement -

Related news

error: Content is protected !!