Saturday, May 18, 2024
spot_imgspot_img
spot_imgspot_img

ಉಪ್ಪಿನಂಗಡಿ: ಜಾಗದ ವಿಚಾರದಲ್ಲಿ ಅಂಗಡಿಗೆ ನುಗ್ಗಿ ನಾಲ್ವರ ಮೇಲೆ ಹಲ್ಲೆ ನಡೆಸಿದ ತಂಡ..!!

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಜಾಗದ ವಿಚಾರದ ತಕರಾರಿಗೆ ಸಂಬಂಧಿಸಿ ತಂಡವೊಂದು ಅಂಗಡಿಗೆ ನುಗ್ಗಿ ನಾಲ್ವರ ಮೇಲೆ ಹಲ್ಲೆ ಮತ್ತು ಗೂಂಡಾಗಿರಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿ ನಡೆದಿದೆ.

ಹರೀಶ ನಾಯ್ಕ, ಸುದರ್ಶನ್ ಕುಮಾರ್, ರಮಾನಂದ, ಭರತ್ ಕುಮ್ಡೇಲು ಮತ್ತು ತಂಡದವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವವರ ಮೇಲೆ ದೌರ್ಜನ್ಯ ಕಾಯ್ದೆಯಡಿ ಇತ್ತಂಡಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಇತ್ತಂಡಗಳ ದೂರಿನಲ್ಲೇನಿದೆ..?

ದೂರು-1

ಜಗಜೀವನ ರೈ ಮನೆ ಕೆಲಸಗಾರ ಬಾಂಗಟು ಪಾಸ್ವಾನ್ ಉಪ್ಪಿನಂಗಡಿ ಠಾಣೆಗೆ ನೀಡಿದ ದೂರಿನನ್ವಯ ಸುದರ್ಶನ ಮತ್ತು ಸೇರಿದಂತೆ 10-15 ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಜಗಜೀವನ ರೈ ಅವರ ಉಪ್ಪಿನಂಗಡಿ ಜಂಕ್ಷನ್‌ ಬಳಿ ಇರುವ ಹಳೆ ಕಟ್ಟಡದ ದುರಸ್ತಿ ಕೂಲಿ ಕೆಲಸ ಮಾಡುತ್ತಿದ್ದ ಸಮಯ ಮಧ್ಯಾಹ್ನ 3.10 ಗಂಟೆಗೆ ಆರೋಪಿಗಳಾದ ಸುದರ್ಶನ ಹಾಗೂ ಇತರ 10-15 ಜನ ಅಕ್ರಮ ಕೂಟ ಸೇರಿಕೊಂಡು ಜಗಜೀವನ ರೈ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬಾಂಗಟು ಪಾಸ್ವಾನ್‌ ಉದ್ದೇಶಿಸಿ ಆರೋಪಿ ಸುದರ್ಶನ್ ಜಾತಿ ನಿಂದನೆ ಮಾಡಿರುವುದಲ್ಲದೇ ಅವರ ಕಾಲಿನಲ್ಲಿದ್ದ ಚಪ್ಪಲಿಯಿಂದ ಹಲ್ಲೆ ನಡೆಸಿದ್ದು, ಇದನ್ನು ಕಂಡು ಜಗಜೀವನ ರೈ ರವರು ಬಿಡಿಸಲು ಬಂದಾಗ ಇತರ 10-15 ಜನರು ಕೈಯಿಂದ ಅವರ ಕೆನ್ನೆಗೆ ಬೆನ್ನಿಗೆ ಹಾಗೂ ಶರೀರಕ್ಕೆ ಯದ್ವಾ ತದ್ವಾ ಹೊಡೆಯುತ್ತಿದ್ದಂತೆ ಪೊಲೀಸರು ಬರುವುದನ್ನು ಕಂಡು ಆರೋಪಿಗಳು ಓಡಿ ಹೋಗಿದ್ದಾರೆ.

ಘಟನೆಯಲ್ಲಿ ಬಾಂಗಟು ಪಾಸ್ವಾನ್‌ ಗಾಯಗೊಂಡು ಮೆಡಿಕಲ್ ನಿಂದ ಮಾತ್ರೆಯನ್ನು ಪಡೆದುಕೊಂಡು ತೆರಳಿದ್ದು, ಈ ಘಟನೆಯ ಬಗ್ಗೆ ಜಗಜೀವನ ರೈ ದೂರು ನೀಡಿರಬಹುದೆಂದು ಭಾವಿಸಿ ತಡವಾಗಿ ದೂರು ನೀಡಿದ್ದಾರೆ. ಈ ಘಟನೆಗೆ ಜಗಜೀವನ ರೈ, ಹಾಗೂ ಆರೋಪಿ ಸುದರ್ಶನ್ ರವರಿಗೆ ಜಾಗದ ಕಟ್ಟಡದ ವಿಚಾರದಲ್ಲಿ ತಕರಾರು ಇದ್ದು ಕಟ್ಟಡದ ದುರಸ್ತಿ ಕೆಲಸವನ್ನು ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ಕೃತ್ಯವನ್ನು ಆರೋಪಿಗಳನ್ನು ಎಸಗಿದ್ದಾರೆ ಎಂದು ಜಗಜೀವನ ರೈ ಮನೆ ಕೆಲಸಗಾರ ಬಾಂಗಟು ಪಾಸ್ವಾನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ದೂರು-2

ಹರೀಶ್ ನೀಡಿದ ದೂರಿನನ್ವಯ ಜಗಜೀವನ್ ರೈ, ಭವೀಶ್ ರೈ, ಸಂದೀಪ ಮತ್ತು ಇತರರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಪ್ಪಿನಂಗಡಿ ಪೇಟೆಯಲ್ಲಿರುವ ಹಳೆಯ ಕಟ್ಟಡದ ಮೇಲ್ಛಾವಣಿಯ ಕೆಲಸವನ್ನು ಜಗಜೀವನ್ ರೈ, ಭವಿಷ್, ಸಂದೀಫ್ ಹಾಗೂ ಇತರರು ಸೇರಿಕೊಂಡು ಕೆಲಸ ಮಾಡುತ್ತಿದ್ದಾಗ ಸಂಜೆ ಸುಮಾರು 3.00 ಗಂಟೆಯ ಸಮಯಕ್ಕೆ ಮಾಲೀಕರಾದ ಸುದರ್ಶನ್ ಕುಮಾರ್ ಎಂಬವರು ಅಲ್ಲಿಗೆ ಹೋಗಿ ಕೆಲಸ ಮಾಡಬೇಡ ಎಂದು ಹೇಳಿದಾಗ ಜಗಜೀವನ್ ರೈ, ಭವೀಶ್ ಮತ್ತು ಸಂದೀಪ್ ಎಂಬವರು ಅವರ ಮೇಲೆ ಹಲ್ಲೆ ಮಾಡುತ್ತಿದ್ದಾಗ ಹರೀಶ್ ಹಾಗೂ ರಮಾನಂದ ಬಿಡಿಸಲು ಹೋದಾಗ ಅವರು ಹರೀಶ್‌ರನ್ನು ಉದ್ದೇಶಿಸಿ ”ನಾಯ್ಕ ಜಾತಿಗ್ ಪುಟ್ಟುನಾಯ” ಈ ಏರ್ ಪುಡ್ಪಾಯರ ಎಂದು ತುಳು ಭಾಷೆಯಲ್ಲಿ ಜಾತಿ ನಿಂದನೆ ಮಾಡಿ ಜಗಜೀವನ್ ರೈ ಹರೀಶ್‌ರನ್ನು ದೂಡಿ ಹಾಕಿ ಕಾಲಿನಿಂದ ತುಳಿದಿರುತ್ತಾರೆ.

ಭವೀಶ್ ಕಬ್ಬಿಣದ ರಾಡ್ ನಿಂದ ಸೊಂಟಕ್ಕೆ ಹೊಡೆದಿರುತ್ತಾರೆ. ಸಂದೀಪ್ ವೆಲ್ಡಿಂಗ್ ಉಪಕರಣದಿಂದ ಎಡ ತೋಳಿಗೆ ಹೊಡೆದ ಕಾರಣ ಗೀರಿದ ಗಾಯವಾಗಿರುತ್ತದೆ. ರಮಾನಂದರವರನ್ನು ಭವೀಶ್ ದೂಡಿ ಹಾಕಿ ಬೆನ್ನಿಗೆ ತುಳಿದಿರುತ್ತಾರೆ. ಗಾಯಗೊಂಡ ಹರೀಶ್ ಹಾಗೂ ರಮಾನಂದರವರನ್ನು ತಿಮ್ಮಪ್ಪ ಎಂಬವರು ಖಾಸಗಿ ವಾಹನದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಹರೀಶ್‌ರನ್ನು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ರಮಾನಂದ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.

- Advertisement -

Related news

error: Content is protected !!