Tuesday, June 9, 2026
spot_imgspot_img
spot_imgspot_img

ಉಪ್ಪಿನಂಗಡಿ: ಕಾರು-ಆಟೋ ರಿಕ್ಷಾ ನಡುವೆ ಅಪಘಾತ; ಇಬ್ಬರಿಗೆ ಗಾಯ..!

- Advertisement -
- Advertisement -

ಉಪ್ಪಿನಂಗಡಿ: ಕಾರು ಹಾಗೂ ಅಟೋ ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಇಲ್ಲಿನ 34 ನೆಕ್ಕಿಲಾಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪೆರ್ನೆ ಕಡೆ ಸಾಗುತ್ತಿದ್ದ ನಝೀರ್ ಜೋಗಿಬೆಟ್ಟು ಎಂಬವರ ಆಟೋ ರಿಕ್ಷಾಕ್ಕೆ ಪುತ್ತೂರು ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಕಾರು ಉಪ್ಪಿನಂಗಡಿ ಕಡೆ ಹೋಗಲು ತಿರುವು ಪಡೆದು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರಿದ್ದು, ಅವರು ಅಲ್ಪ ಪ್ರಮಾಣದ ಗಾಯಗೊಂಡು, ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಗಾಯಾಳುಗಳನ್ನು ಅಲ್ಲಿಯೇ ಇದ್ದ ಅಟೋ ಚಾಲಕ ಕಲಂದರ್ ಶಾಫಿ ತಕ್ಷಣ ಆಸ್ಪತ್ರೆಗೆ ಕರೆತರುವಲ್ಲಿ ನೆರವಾದರು. ಅಪಘಾತದಿಂದ ರಿಕ್ಷಾದ ಒಂದು ಭಾಗ ಜಖಂಗೊಂಡಿದೆ.

- Advertisement -

Related news

error: Content is protected !!