Friday, July 24, 2026
spot_imgspot_img
spot_imgspot_img

ಉರಿಮಜಲು: ಇಡ್ಕಿದು ಸೇವಾ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ಸಂಘವು 2024-25 ನೇ ಸಾಲಿನಲ್ಲಿ 545 ಕೋಟಿ ವ್ಯವಹಾರ ಮಾಡಿ 2,01,68,360.36 ನಿವ್ವಳ ಲಾಭ ಗಳಿಸಿದೆ- ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು

ಇಡ್ಕಿದು ಸೇವಾ ಸಹಕಾರಿ ಸಂಘವು 2 ಗ್ರಾಮ ವ್ಯಾಪ್ತಿಯಲ್ಲಿ ಉರಿಮಜಲಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದು 4 ಶಾಖೆಗಳಾದ ಮಿತ್ತೂರು, ಸೂರ್ಯ, ಕಬಕ ಅಡ್ಯಾಲುಕರೆ, ಕುಂಡಡ್ಕ ಹೊಂದಿದ್ದು ಎಲ್ಲವೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಕಚೇರಿ ’ಶತಾಮೃತ’ ದಲ್ಲಿ ನಡೆಯಿತು.

’ಸಭೆಯಲ್ಲಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡಿ ’ಸಹಕಾರಿ ಕ್ಷೇತ್ರದಲ್ಲಿ 106 ವರ್ಷಗಳ ಇತಿಹಾಸ ಹೊಂದಿರುವ ಇಡ್ಕಿದು ಸೇವಾ ಸಹಕಾರಿ ಸಂಘವು ವಿವಿಧ ಸಾಧನೆಗಾಗಿ ಈ ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕಿನ ಪ್ರಶಸ್ತಿಗೆ ಆಯ್ಕೆಯಾಗಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಸಂಘವು ಅತ್ಯುತ್ತಮ ಕಾರ್ಯನಿರ್ವಹಣೆಯೊಂದಿಗೆ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಗಣನೀಯ ಪ್ರಗತಿ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಇವರಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಗೆ ಆಯ್ಕೆಯಾಗಿದೆ. ಸತತ 17 ವರ್ಷಗಳಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡಕೊಂಡ ಹೆಗ್ಗಳಿಕೆ ಇಡ್ಕಿದು ಸೇವಾ ಸಹಕಾರಿ ಸಂಘದ್ದಾಗಿದೆ. 2024-25 ನೇ ಸಾಲಿನಲ್ಲಿ ಸಂಘವು 129.86 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, 545 ಕೋಟಿ ವ್ಯವಹಾರ ಮಾಡಿ 2,01,68,360.36 ನಿವ್ವಳ ಲಾಭಗಳಿಸಿದೆ ಎಂದು ಘೋಷಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ಲೆಕ್ಕ ಪತ್ರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್‌ ನಾಯ್ಕ್‌ ಎಸ್‌ ಇವರನ್ನು ಹಾಗೂ ಸಂಘದ ನಿವೃತ್ತ ಸಿಬ್ಬಂದಿಗಳಾದ ಜಿನ್ನಪ್ಪ ಕೆ ಹಾಗೂ ಗಂಗಾಧರ ಡಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ರುದ್ರಭೂಮಿಯಲ್ಲಿ ದುಡಿಯುವ 5292 ನೇ ಸದಸ್ಯ ನಾರಾಯಣ ನಾಯ್ಕ ಮುದಲೆಗುಂಡಿಯರನ್ನು ಗೌರವಿಸಲಾಯಿತು. ಇಡ್ಕಿದು ಕುಳ ಗ್ರಾಮದ ಅಂಗನವಾಡಿ ಸಹಾಯಕಿಯರನ್ನು, ’2024-25 ನೇ ಸಾಲಿನಲ್ಲಿ ಉತ್ತಮ ರೀತಿಯಲ್ಲಿ ಉಳಿತಾಯ ಮತ್ತು ಸಾಲದ ವ್ಯವಹಾರಗಳನ್ನು ನಡೆಸಿದ ನವೋದಯ ಗುಂಪುಗಳನ್ನು, ಗೌರವಿಸಲಾಯಿತು. ಮತ್ತು ’2024-25 ನೇ ಸಾಲಿನಲ್ಲಿ ವ್ಯಾಪಾರ ವಿಭಾಗದಲ್ಲಿ ಅತೀ ಹೆಚ್ಚು ವ್ಯಾಪಾರ ವಹಿವಾಟು ಮಾಡಿದವರಿಗೆ, ’2024-25 ನೇ ಸಾಲಿನಲ್ಲಿ ಸಂಘದ ಕ್ಯಾಂಪ್ಕೋ ವಿಭಾಗದಲ್ಲಿ ಅತೀ ಹೆಚ್ಚು ವಹಿವಾಟು ಮಾಡಿದವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ’2024-25 ನೇ ಸಾಲಿನಲ್ಲಿ ವ್ಯಾಪ್ತಿಯ ಶಾಲೆಯ ಅತೀ ಹೆಚ್‌ಉ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ’2024-25 ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಯ ಶಾಲೆಗಳಲ್ಲಿರುವ ವಿಶೇಷ ಅವಶ್ಯಕತೆಯುಳ್ಳ ಮಕ್ಕಳಿಗೆ ಸಹಾಯಧನ ನೀಡಲಾಯಿತು.’2024-25 ನೇ ಸಾಲಿನಲ್ಲಿ ಸಂಘದ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಸಭೆಯಲ್ಲಿ ಇಡ್ಕಿದು ಸೇವಾ ಸಹಕಾರಿ ಮಹಾಸಭೆಯಲ್ಲಿ ಉಪಾಧ್ಯಕ್ಷ ರಾಮ್‌ಭಟ್‌ ನೀರಪಳಿಕೆ, ನಿರ್ದೇಶಕರುಗಳಾದ ಚಂದ್ರಹಾಸ ಕೆಂರ್ದೇಲು, ಜಯಂತ ಕಂಪ, ನವೀನ ಕೆ.ಪಿ, ಉಮೇಶ ವಡ್ಯರ್ಪೆ, ಲೋಹಿತಾಶ್ವ ಎಂ, ಸತೀಶ ಕೆ, ಆನಂದ ಕೆ, ಹೃಷಿಕೇಷ ಕೆ ಎಸ್‌, ಪದ್ಮಾವತಿ ಕೂವೆತ್ತಿಲ, ಶ್ರೀಮತಿ ವಿದ್ಯಾ ವಿ, ಯೋಗೀಶ ಹೆಚ್‌, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ಹಲವು ವಿಚಾರಗಳ ಬಗ್ಗೆ ಸಂವಾದ ನಡೆಯಿತು. ಸಂಘದ ಅಧ್ಯಕ್ಷರು ಸುಧಾಕರ ಶೆಟ್ಟಿ ಬೀಡಿನಮಜಲು ಸ್ವಾಗತಿಸಿ, ಉಪಾಧ್ಯಕ್ಷ ರಾಮ್‌ಭಟ್‌ ನೀರಪಳಿಕೆ ಧನ್ಯವಾದವಿತ್ತರು. ಕು. ವಿಶಂತಿ ಪ್ರಾರ್ಥಿಸಿದರು. ಈಶ್ವರ ಕುಲಾಲ್‌ ಹಾಗೂ ಸಂಜೀವ ಪಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!