Thursday, July 23, 2026
spot_imgspot_img
spot_imgspot_img

ವೀರಕಂಬ ಶ್ರೀ ಶಾರದ ಭಜನಾ ಮಂದಿರದಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಉಚಿತ ನೋಂದಾವಣೆ ಶಿಬಿರ.

- Advertisement -
- Advertisement -

ವಿಟ್ಲ:- ಬಿಜೆಪಿ ಮಾಣಿ ಮಹಾಶಕ್ತಿ ಕೇಂದ್ರ ಹಾಗೂ ಬಿಜೆಪಿ ಯುವ ಮೋರ್ಚದ ವತಿಯಿಂದ ಆಯುಷ್ಮಾನ್ ಭಾರತ್ ಯೋಜನೆಗೆ  ಉಚಿತ ನೋಂದಾವಣೆ  ಕಾರ್ಯಕ್ರಮ   ವೀರಕಂಬ ಶ್ರೀ ಶಾರದ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸಂದೇಶ ಕುಮಾರ್ ಶೆಟ್ಟಿ ಅರೆಬೆಟ್ಟು ರವರು ದೀಪ ಬೆಳಗಿಸಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯ ವಂತನಾದರೆ ದೇಶವೇ ಆರೋಗ್ಯವಂತ ದೇಶವಾಗುತ್ತದೆ. ಆರೋಗ್ಯದ ಬಗ್ಗೆ ಗಮನ ನೀಡುವುದು ಅಗತ್ಯವಾಗಿದ್ದು ಕೇಂದ್ರ ಸರಕಾರದ ಆಯುಷ್ಮಾನ್ ಕಾರ್ಡು ಪ್ರತಿಯೊಬ್ಬರಿಗೂ ಆಪತ್ಕಾಲದಲ್ಲಿ ಸಹಕಾರಿಯಾಗುತ್ತದೆ ಎಂದು  ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿ ಶಕ್ತಿಕೇಂದ್ರದ ಅಧ್ಯಕ್ಷರಾದ ಶ್ರೀಯುತ ರೊನಾಲ್ಡ್ ಡಿಸೋಜ ವಹಿಸಿದ್ದರು ,
ವೇದಿಕೆಯಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಸಂಚಾಲಕರಾದ ಶ್ರೀ ನಾರಾಯಣ ಭಟ್ ಬೆತ್ತ ಸರವು ,ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಸನತ್ ಕುಮಾರ್ ರೈ ,ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕರಾದ ಶ್ರೀಯುತ ರಾಜೇಶ್ ನಾಯಕ್ ಉಳಿಪಾಡಿಗುತ್ತು,  ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಶ್ರೀಮತಿ ಗೀತ ಚಂದ್ರಶೇಖರ್ ನೆರಳಕಟ್ಟೆ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪುಷ್ಪರಾಜ್ ಚೌಟ ಆಗಮಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಸೀಮಾ ಮಾಧವ, ವೀರಕಂಬ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಜಯಂತಿ ಜನಾರ್ಧನ್ ,ಉದ್ಯಮಿ ಶ್ರೀದೇವಿ  ಕನ್ಟ್ರಕ್ಷನ್ ಮಾಲಕ  ಸಂದೀಪ್ ಕುಮಾರ್ ಶೆಟ್ಟಿ  ಅರೆಬೆಟ್ಟು, ಬಿಜೆಪಿ ಹಿಂದುಳಿದ ವರ್ಗದ ಸದಸ್ಯರಾದ ವೀರಪ್ಪ ಮೂಲ್ಯ, ವೀರಕಂಬ ಗ್ರಾಮ  ಭೂತ ಸಮಿತಿಯ  ಅಧ್ಯಕ್ಷರುಗಳಾದ  ದಿನೇಶ್ ಪೂಜಾರಿ  ಹಾಗೂ ಸದಾಶಿವ , ಪ್ರಧಾನ ಕಾರ್ಯದರ್ಶಿಗಳಾದ  ಪ್ರಕಾಶ್ ಬೆತ್ತ ಸರವು  ಹಾಗೂ  ರಮೇಶ್ ಗೌಡ ಮೈರ, ಬಿಜೆಪಿ ಎಸ್. ಟಿ.  ಮೋರ್ಚಾ  ಇದರ ಸದಸ್ಯರಾದ  ಕೇಶವ ನಾಯ್ಕ  ಕೆಮ್ಮಟೆ, ಬಂಟ್ವಾಳ  ಭೂ ಅಭಿವೃದ್ಧಿ  ಬ್ಯಾಂಕ್  ಇದರ ನಿರ್ದೇಶಕರಾದ  ಚಂದ್ರಶೇಖರ   ಬಾಯಿಲ, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜೀವ ಮೂಲ್ಯ ಉಪಸ್ಥಿತರಿದ್ದರು ಸುಮಾರು 673 ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು.

- Advertisement -

Related news

error: Content is protected !!