Friday, March 29, 2024
spot_imgspot_img
spot_imgspot_img

ನಿಯಮ ಎಲ್ಲರಿಗೂ ಒಂದೇ : ಮಾಸ್ಕ್ ಧರಿಸದ ಕಾರಣ ಸರ್ಕಲ್ ಇನ್ಸ್ ಪೆಕ್ಟರ್ ಗೆ ದಂಡ!

- Advertisement -G L Acharya panikkar
- Advertisement -

ವಿಜಯವಾಡ: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ಹೆಚ್ಚಾಗಿದೆ. ದಿನೇದಿನೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಯಾ ರಾಜ್ಯಗಳು ತಮಗೆ ಅನುಗುಣವಾಗಿ ನಿಯಮಗಳನ್ನು ಜಾರಿ ಮಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸುವುದನ್ನು ಸರ್ಕಾರಗಳು ಕಡ್ಡಾಯ ಮಾಡಿವೆ.

ಯಾರು ಮಾಸ್ಕ್​ ಧರಿಸುವುದಿಲ್ಲವೋ ಅಂತವರಿಂದ ದಂಡ ವಸೂಲಿ ಸಹ ಮಾಡಲಾಗುತ್ತಿದೆ. ಆದರೆ, ಈ ದಂಡ ವಸೂಲಿ ಕೆಲವೊಮ್ಮೆ ತಾರಕಕ್ಕೇರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಉದಾಹರಣೆಗಗಳು ನಮ್ಮ ಮುಂದಿವೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾಸ್ಕ್​ ಧರಿಸದಿದ್ದರೆ ಯಾರು ಕೇಳಲ್ಲ. ಆದರೆ, ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡುತ್ತಾರೆಂಬ ಆರೋಪವಿದೆ.

ಆದರೆ, ಸರ್ಕಾರದ ನಿಯಮ ಎಲ್ಲರಿಗೂ ಒಂದೇ ಎಂಬುದನ್ನು ಇಲ್ಲೊಬ್ಬ ಪೊಲೀಸ್​ ವರಿಷ್ಠಧಿಕಾರಿ ನಿರೂಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗುಂಟೂರು ಗ್ರಾಮಾಂತರ ಪೊಲೀಸ್​ ವರಿಷ್ಠಾಧಿಕಾರಿ ಅಮ್ಮಿರೆಡ್ಡಿ ಮಾಸ್ಕ್​ ಧರಿಸದವರ ವಿರುದ್ಧ ಭಾನುವಾರ ವಿಶೇಷ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ತಳ್ಳೂರು ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ ರಾವ್​ ಮಾಸ್ಕ್​ ಧರಿಸದೆಯೇ ತಮ್ಮ ಮುಂದೆ ಹಾದು ಹೋಗಿದ್ದನ್ನು ಅಮ್ಮಿರೆಡ್ಡಿ ಅವರು ಗಮನಿಸಿದರು.

ತಮ್ಮ ಸಿಬ್ಬಂದಿ ಸಹಾಯದಿಂದ ವೃತ್ತನಿರೀಕ್ಷಕರನ್ನು ಬರಹೇಳಿದ ಎಸ್​ಪಿ, ಮಾಸ್ಕ್​ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿದರು. ಕರ್ತವ್ಯಕ್ಕೆ ಹಾಜರಾಗುವ ಆತುರದಲ್ಲಿ ಮರೆತುಬಿಟ್ಟೆ ಎಂದು ಸಿಐ ಪ್ರತಿಕ್ರಿಯಿಸಿದರು. ಆದರೆ, ಸಿಐ ಉತ್ತರದಿಂದ ಸಮಾಧಾನಗೊಳ್ಳದ ಎಸ್​ಪಿ, ಕರೊನಾ ಬಗ್ಗೆ ಸಲಹೆ ನೀಡಿ, ಮಾಸ್ಕ್​ ಧರಿಸದಿದ್ದಕ್ಕೆ ದಂಡ ವಿಧಿಸಿದರು. ಬಳಿಕ ತಾವೇ ಸಿಐಗೆ ಮಾಸ್ಕ್​ ಧರಿಸಿದರು.

driving

ಇದೇ ವೇಳೆ ಸಾರ್ವಜನಿಕರಿಗೂ ಮಾಸ್ಕ್​ ಧರಿಸಲು ಎಸ್​ಪಿ ತಿಳಿ ಹೇಳಿದರು. ಸ್ಥಳೀಯ ವ್ಯಾಪಾರಿಗಳ ಬಳಿ ಹೋಗಿ ಮಾಸ್ಕ್​ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರು. ಎಸ್​ಪಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

Related news

error: Content is protected !!