




ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ವತಿಯಿಂದ ವಿಟ್ಲ ಪಡ್ನೂರು ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರಗಳ ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳನ್ನು ಸೇರಿಸಿಕೊಂಡು ಗ್ರಾಮೀಣ ಮಟ್ಟದ ಮಹಿಳೆಯರಿಗಾಗಿ ಮಹಿಳಾ ಭಾವೈಕ್ಯತಾ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನವು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಸರಿಯೋಜಕರಾದ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಸ್ಥಾಪಕಾಧ್ಯಕ್ಷರಾದ ಲ! ಶ್ರೀ ಬಿ ಸಂದೇಶ್ ಶೆಟ್ಟಿ ಬಿಕ್ನಾಜೆ ಕಾರ್ಯಕ್ರಮಕ್ಕೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ 317d ಜಿಲ್ಲಾ ರಾಜ್ಯಪಾಲರಾದ ಅರವಿಂದ್ ಶೆಣೈ ಕುಡ್ಪಿ ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮುಖೇನ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭವನ್ನು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರವಿಕುಮಾರ್ ಅವರ ವಹಿಸಿದ್ದರು. ಲಯನ್ಸ್ ಜಿಲ್ಲಾ ಸಂಪರ್ಕ ಅಧಿಕಾರಿ ಶ್ರೀ ಸುದರ್ಶನ ಪಡಿಯಾರ್ , ವಿಟ್ಲ ಪದ್ಮೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಜಯಂತ್ ಪಿ, ವಿಟ್ಲ ಪಟ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕೊಡಂಗಾಯಿ ಇದರ ಉಪಾಧ್ಯಕ್ಷರಾದ ಶ್ರೀ ರವೀಶ್ ಶೆಟ್ಟಿ ಕರ್ಕಳ, ವಿಟ್ಲ ಪಡ್ನೂರು ಗ್ರಾಮ ಆಡಳಿತ ಅಧಿಕಾರಿ ಶ್ರೀಮತಿ ವೈಶಾಲಿ, ವಿಟ್ಲ ಪಡ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀಶೈಲ ಡೋಣುರ ,ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಇದರ ನಿವೃತ್ತ ಮುಖ್ಯ ಶಿಕ್ಷಕರು ಶ್ರೀರಾಮಚಂದ್ರ ನಾಯ್ಕ, ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಯಂ.ವಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕೊಡಂಗಾಯಿ ಇದರ ಉಪಾಧ್ಯಕ್ಷರಾದ ಶ್ರೀ ಹೇಮಾನಂದ ಶೆಟ್ಟಿ ಶಾಲಾ ಎಸ್ ಡಿ. ಎಂ ಸಿ ಅಧ್ಯಕ್ಷರಾದ ಶ್ರೀ ಬಿ ಎಂ ಹಸೈನಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಕಾರ್ಯದರ್ಶಿಯರಾದ ದಿನಕರ್ ಆಳ್ವ , ಡಿಜಿ ಕೊ- ಆಡಿನೇಟರ್ ಸುನಿಲ್ ಹೆಗಡೆ ಅವರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀರಾಮಚಂದ್ರ ನಾಯ್ಕ, ನಿವೃತ್ತ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಮೋಹಿನಿ, ನಿವೃತ್ತ ಶಿಕ್ಷಕರಾದ ಶ್ರೀ ರಾಮಣ್ಣಗೌಡ ಗಡದ ಕೋಡಿ, ನಿವೃತ್ತ ಪೂರ್ಲಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕಮಲ.ಡಿ, ನಿವೃತ್ತ ಮೆಸ್ಕಾಂ ಉದ್ಯೋಗಿ ಶ್ರೀ ಲ! ನಾಗರಾಜ್, ನಿವೃತ್ತ ಎಎಸ್ಐ ಪೊಲೀಸ್ ಅಧಿಕಾರಿ ಶ್ರೀ ಕುಕ್ಕಿಲ ಮೋನಪ್ಪ ಗೌಡ, ನಿವೃತ್ತ ಸೈನಿಕರು ಶ್ರೀ ನಾಗರಾಜ್ ಕೆ ಕುಕ್ಕಿಲ ಇವರಿಗೆ ಸನ್ಮಾನ ಹಾಗೂ ಗೌರವಾರ್ಪಣೆ ಮಾಡಲಾಯಿತು. ಹಿರಿಯ ಕೃಷಿಕರಾದ ಶ್ರೀ ಲಕ್ಷ್ಮಣ ಸಪಲ್ಯ ಕುಕ್ಕಿಲ, ಕ್ರೀಡಾ ಕ್ಷೇತ್ರದಲ್ಲಿ ಕುಮಾರಿ ಕೀರ್ತಿ ಲಕ್ಷ್ಮಣಗೌಡ ಕುಕ್ಕಿಲ, ಶಿಕ್ಷಣ ಕ್ಷೇತ್ರದಲ್ಲಿ ಕುಮಾರಿ ಸುಚಿತಾ ಕಾಪುಮಜಲು, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಅಂಗನವಾಡಿ ಕಾರ್ಯಕರ್ತರು ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರ ಮಕ್ಕಳಿಗೆ ಗೌರವಾರ್ಪಣೆ ಮಾಡಲಾಯಿತು. ವಿಟ್ಲ ಪದ್ಮೂರು ಗ್ರಾಮದ ಎಸ್ ಎಲ್ ಸಿ ಯಲ್ಲಿ 600 ಕಿಂತ ಅಧಿಕಾಂಕ ಹಾಗೂ ಪಿಯುಸಿಯಲ್ಲಿ 575ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೌರವಾರ್ಪಣೆ ಮಾಡಲಾಯಿತು.
ವಿಟ್ಲ ಪಡ್ನೂರು ಗ್ರಾಮದ ಎಲ್ಲಾ ಹನ್ನೊಂದು ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಅವರ ಬೇಡಿಕೆಗಳಿಂದ ಮೂಲವಾಗಿ ನಾಮಪಲಕ ಮಕ್ಕಳ ಕುರ್ಚಿ ಟೇಬಲ್ ಇತ್ಯಾದಿಗಳನ್ನು ವಿತರಣೆ ಮಾಡಲಾಯಿತು. ಅವಘಡದಲ್ಲಿ ಬಲ ಕೈಯನ್ನು ಕಳೆದುಕೊಂಡ ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಅವರನ್ನು ಕ್ಲಬ್ ವತಿಯಿಂದ ಗುರುತಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ, ರಾಘವ ಗೌಡನ, ಮೋಹನ್ ಕಟ್ಟೆ, ರವಿಕುಮಾರ್ ಆರ್. ಎಸ್, ಕೃಷ್ಣಪ್ಪ ಮೂಲ್ಯ, ಮಾಜಿ ಅಧ್ಯಕ್ಷರಾದ ಜಯರಾಮ್ ಬಳ್ಳಾಲ್ ಅವರು ಉಪಸ್ಥಿತರಿದ್ದರು.








