Saturday, July 25, 2026
spot_imgspot_img
spot_imgspot_img

“ಫ್ರೆಂಡ್ಸ್ ಕಾಪುಮಜಲು(ರಿ)” ಇವರ ವತಿಯಿಂದ ಪುಸ್ತಕ ವಿತರಣ ಕಾರ್ಯಕ್ರಮ

- Advertisement -
- Advertisement -

ಕಾಪುಮಜಲು: “ಫ್ರೆಂಡ್ಸ್ ಕಾಪುಮಜಲು (ರಿ)” ಇವರ ಆಶ್ರಯದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಬೇಕೆಂಬ ಒಂದು ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಕೂಟವು ಕಳೆದ ತಿಂಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದರ ಭಾಗವಾಗಿ ಬಡ ವಿಧ್ಯಾರ್ಥಿಗಳ ಪುಸ್ತಕ ವಿತರಣ ಕಾರ್ಯಕ್ರಮವು ಶ್ರೀ ಮಲರಾಯಿ ಭಜನಾ ಮಂಡಳಿ ಕಾಪುಮಜಲಿನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಜೊತೆ ಹಿಂದೂ ಮುಖಂಡ ಚರಣ್ ಕೆ ಕಾಪುಮಜಲು, ಜನನಿ ಕನ್ಸ್ಟ್ರಕ್ಷನ್ ಇದರ ಮಾಲಕ ಆನಂದ್ ಮಡಿವಾಳ ಕಾಪುಮಜಲು, ಶಿಲ್ಪಶ್ರೀ ಯುವಕ ಮಂಡಲ(ರಿ.) ಇವರ ಅಧ್ಯಕ್ಷ ರೋಹಿತ್ ರೈ ಚೆಂಬರಡ್ಕ, ಫ್ರೆಂಡ್ಸ್ ಕಾಪುಮಜಲು(ರಿ.) ಇದರ ಅಧ್ಯಕ್ಷ ವಿನಯ್ ಜೋಗಿ ಕಾಪುಮಜಲು, ಹಾಗೂ ಫ್ರೆಂಡ್ಸ್ ಕಾಪುಮಜಲು(ರಿ.) ಇದರ ಸದಸ್ಯರಾದ ಸಂತೋಷ್ ಶೆಟ್ಟಿ, ಸುಕೇಶ್ ಮಡಿವಾಳ,ದೇವದಾಸ್ ಪೂಜಾರಿ, ಪ್ರವೀಣ್ ಎಸ್ ಕೆ, ರಂಜಿತ್ ಜೋಗಿ, ರಕ್ಷಿತ್ ಶೆಟ್ಟಿ , ಜಯ ಜೋಗಿ, ಚೇತನ್ ಜೋಗಿ, ಶಿವರಾಜ್ ಗಾಣಿಗ,ಅನಿಲ್ ಗೌಡ ಉಪಸ್ತಿತರಿದ್ದರು.

ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷಕ್ಕೆ ಬೇಕಾದ ಪುಸ್ತಕ, ಕಂಪಾಸ್‌ ಬಾಕ್ಸ್‌, ಪೆನ್‌, ಪೆನ್ಸಿಲ್‌ ಮತ್ತು ಅಗತ್ಯವಿರುವ ಇತರೆ ವಸ್ತುಗಳನ್ನು ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ದಾನಿಗಳಾದ SLV Book House ಇದರ ಮಾಲಕರೂ ಪುಸ್ತಕ ನೀಡುವ ಮೂಲಕ ನಮ್ಮೊಂದಿಗೆ ಕೈ ಜೋಡಿಸಿದರು.

- Advertisement -

Related news

error: Content is protected !!