Thursday, April 25, 2024
spot_imgspot_img
spot_imgspot_img

ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವಿಟ್ಲ ಪ್ರಖಂಡ ಇದರ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ವಿಟ್ಲ(ನ.1): ವಿಶ್ವ ಹಿಂದು ಪರಿಷದ್ ಭಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವಿಟ್ಲ ಪ್ರಖಂಡ ಇದರ ಆಶ್ರಯದಲ್ಲಿ ಕೆ. ಎಂ. ಸಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಯೋಧ್ಯಾಧಿಪತಿ ಪ್ರಭು ಶ್ರೀ ರಾಮಚಂದ್ರನ ಜನ್ಮಭೂಮಿಯ ಮುಕ್ತಿಗಾಗಿ ವೀರ ಬಲಿದಾನಗೈದ ಕರಸೇವಕರ ಬಲಿದಾನಗೈದ ಕರಸೇವಕರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ದಿನಾಂಕ 01-11-2020ನೇ ಆದಿತ್ಯವಾರ ದ. ಕ. ಜಿ. ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ. ಕೆ ಇವರು ದೀಪ ಪ್ರಜ್ವಲಿಸಿ ಉಧ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ | ಕೃಷ್ಣ ಪ್ರಸನ್ನ ವಹಿಸಿದ್ದರು. ವಿಟ್ಲ ಆರಕ್ಷಕ ಠಾಣೆಯ ಉಪ ನಿರೀಕ್ಷಕರಾದ ವಿನೋದ್ ರೆಡ್ಡಿ ಭಾಗವಹಿಸಿ ಶುಭಹಾರೈಸಿದರು. ಭಜರಂಗದಳ ವಿಟ್ಲ ಪ್ರಖಂಡ ಸಂಚಾಲಕರಾದ ಮಿಥುನ್ ಪೂಜಾರಿ ಕಲ್ಲಡ್ಕ, ಕೆ. ಎಂ. ಸಿ. ಆಸ್ಪತ್ರೆ ಬ್ಲಡ್ ಬ್ಯಾಂಕ್ ನ ವೈದ್ಯರಾದ ಡಾ | ನೇಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಟ್ಲ ಪ್ರಖಂಡ ಅಧ್ಯಕ್ಷರಾದ ಕೃಷ್ಣಪ್ಪ. ಕೆ. ಕಲ್ಲಡ್ಕ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಕಾರ್ಯಧ್ಯಕ್ಷರಾದ ಪದ್ಮನಾಭ ಕಟ್ಟೆ ವಂದಿಸಿದರು. ಗೋಪಿಕಾ ಶೆಣೈ ಪ್ರಾರ್ಥಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್ ಕುಮಾರ್ ಇಡ್ಯಾಳ ವಿಟ್ಲ, ಪ್ರಖಂಡ ಕಾರ್ಯದರ್ಶಿ ಚರಣ್ ಕಾಪುಮಜಲು, ಸಹಕಾರ್ಯದರ್ಶಿ ಮನೋಜ್ ಕಾಶೀಮಠ, ಪ್ರಖಂಡ ಸಹ ಸಂಯೋಜಕರಾದ ಚಂದ್ರಹಾಸ ಕನ್ಯಾನ, ಪ್ರಜ್ವಲ್ ಕಂಬಳಬೆಟ್ಟು, ಪ್ರಖಂಡ ಗೋರಕ್ಷಾ ಪ್ರಮುಖರಾದ ನಾಗೇಶ್ ಸಾಲೆತ್ತೂರು, ಸಹ ಗೋರಕ್ಷಾ ಪ್ರಮುಖರಾದ ಯತೀಶ್ ಪೆರುವಾಯಿ, ವಿಟ್ಲ ನಗರ ಅಧ್ಯಕ್ಷರಾದ ವಿಶ್ವನಾಥ ನಾಯಿತೊಟ್ಟು, ಸಂಚಾಲಕ ಸಂದೀಪ್ ಕಾಶೀಮಠ, ದುರ್ಗಾವಾಹಿನಿ ಸಂಯೋಜಕಿಯಾದ ರೇವತಿ ವಿಟ್ಲ ಉಪಸ್ಥಿತರಿದ್ದರು.150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾವಹಿಸಿದ್ದರು. ಈ ಬಾರಿ 10 ಮಹಿಳಾ ಕಾರ್ಯಕರ್ತರು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.

- Advertisement -

Related news

error: Content is protected !!