Monday, July 27, 2026
spot_imgspot_img
spot_imgspot_img

ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ನಿಡ್ಯ ಹಾಗೂ ಉಪಾಧ್ಯಕ್ಷರಾಗಿ ಬಾಬು ಕೆ.ವಿರವರು ಅವಿರೋಧ ಆಯ್ಕೆ

- Advertisement -
- Advertisement -

ವಿಟ್ಲ: ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ನಿಡ್ಯ ಹಾಗೂ ಉಪಾಧ್ಯಕ್ಷರಾಗಿ ಬಾಬು ಕೆ.ವಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಬುಧವಾರ ನವೆಂಬರ್ 18/11/2020ರಂದು ವಿಟ್ಲ ಪ್ರಧಾನ ಕಚೇರಿಯಲ್ಲಿ ಚುನಾವಣಾಧಿಕಾರಿ ನಾಗೇಂದ್ರ ಬಿ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.

ನಿರ್ದೇಶಕರಾಗಿ ಡಾ.ಗೀತಾಪ್ರಕಾಶ್ ಎ, ರಾಘವ ಪೂಜಾರಿ, ರಮೇಶ್ ಕುಮಾರ್ ಪಿ, ಅಭಿಜಿತ್ ಜೆ, ರವಿ ಬಿ.ಕೆ, ಮಾಧವ ಪಿ, ಶ್ರೀಧರ್ ಬಿ, ವನಿತಾ, ಪುಷ್ಪ ಎಸ್ , ಜಗದೀಶ ವಿ, ಸಂಜೀವ ಪೂಜಾರಿ ಎಮ್ ಅವರು ಆಯ್ಕೆಗೊಂಡರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಜಯಂತ ಪಿ ಸಹಕರಿಸಿದರು.

ಅಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಹಾಸ ಸುವರ್ಣ, ಪ್ರಕಾಶ್, ನರೇಂದ್ರ ಸಿ, ಸಂಜೀವ ಪೂಜಾರಿ ಡಿ, ಗಿರಿಯಪ್ಪ ಪೂಜಾರಿ, ರವಿಚಂದ್ರ, ಹರೀಶ್ ಸಿ.ಎಚ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್, ವಿಟ್ಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ಮೋಹನದಾಸ ಉಕ್ಕುಡ ಮತ್ತು ಪಿಗ್ಮಿ ಸಂಗ್ರಹಗಾರರಾದ ಜಯಪ್ರಕಾಶ್, ವಿವೇಕ್, ಮೋನಾಕ್ಷ, ಸುಂದರ ಪೂಜಾರಿ, ಬಿಲ್ಲವ ಸಂಘದ ಪದಾಧಿಕಾರಿಗಳು, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!