



ಸಹಕಾರ ಸಂಘವು ಇನ್ನಷ್ಟು ಬೆಳೆಯಲಿ ಹತ್ತಾರು ಶಾಖೆಯನ್ನು ತೆರೆಯುವಂತಾಗಲಿ:- ಡಿ.ವಿ. ಸದಾನಂದ ಗೌಡ
ವಿಟ್ಲ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಹತ್ತನೇ ಶಾಖೆ ವಿಟ್ಲದ ಎಂಪಾಯರ್ ಮಹಲ್ ಕಟ್ಟಡದಲ್ಲಿ ಶುಭಾರಂಭಗೊಂಡಿತು. ನೂತನ ಶಾಖೆಯನ್ನು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಬಳಿಕ ಶಾಖೆಗೆ ಶುಭಹಾರೈಸಿದರು.


ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮುಂಗ್ಲಿಮನೆ, ಎಂಪೈರ್ ಮಹಲ್ನ ಮಾಲಕ ಪೀಟರ್ ಪ್ರಾನ್ಸಿಸ್ ಲಾಸ್ರಾದೋ, ಸಂಘದ ನಿರ್ದೇಶಕರಾದ ಇಡ್ಯಡ್ಕ ಮೋಹನ ಗೌಡ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ನೂತನ ಶಾಖೆಗೆ ಶುಭಹಾರೈಸಿದರು.

ವಿಟ್ಲ ಪಟ್ಟಣ ಪಂಚಾಯತ್ನ ಸದಸ್ಯ ಜಯಂತ ಪಿ. ಹೆಚ್, ಸಂಘದ ನಿರ್ದೇಶಕರಾದ ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಜಿನ್ನಪ್ಪ ಗೌಡ ಮಳುವೇಲು,ಲೋಕೇಶ್ ಚಾಕೋಟೆ, ಸುದರ್ಶನ ಗೌಡ ಕೆ., ಸುಪ್ರೀತಾ ರವಿಚಂದ್ರ, ಸಂಜೀವ ಗೌಡ ಕೆ., ತೇಜಸ್ವಿನಿ ಶೇಖರ ಗೌಡ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸಿ.ಇ.ಒ ಸುಧಾಕರ್ ಕೆ. ಹಾಗೂ ಸದಾನಂದ ಡೆಪ್ಪುಣಿರವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಕೇಂದ್ರದ ಮಾಜಿ ಸಚಿವರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡರವರು ಭೇಟಿ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಹಕಾರ ಸಂಘವನ್ನು ಕೇವಲ ನಮ್ಮ ಸಮುದಾಯದವರಿಗೆ ಮಾತ್ರ ಸೀಮಿತ ಮಾಡದೆ ಇತರ ಸಮುದಾಯದವರನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುತ್ತಾ ಬಂದಿರುವುದು ಸಂಸ್ಥೆಯ ಏಳಿಗೆಗೆ ಪೂರಕವಾಗಿದೆ. ಸಹಕಾರ ಸಂಘವು ಇನ್ನಷ್ಟು ಬೆಳೆಯಲಿ ಹತ್ತಾರು ಶಾಖೆಯನ್ನು ತೆರೆಯುವಂತಾಗಲಿ ಎಂದರು.

ಸಂಘದ ನಿರ್ದೇಶಕ ರಾಮಕೃಷ್ಣ ಗೌಡ ಕರ್ಮಲ ಸ್ವಾಗತಿಸಿ, ವಿಟ್ಲ ಶಾಖಾ ವ್ಯವಸ್ಥಾಪಕ ದಿನೇಶ್ ಪೆಲತ್ತಿಂಜ ವಂದಿಸಿದರು. ಸಂಘದ ಸಿ.ಇ.ಒ ಸುಧಾಕರ್ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

ಈಗಾಗಲೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು ದ.ಕ ಇದರ ಒಂಭತ್ತು ಶಾಖೆಗಳು ಪುತ್ತೂರು ಎ.ಪಿ.ಎಂ.ಸಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಸ್.ಎಂ.ಟಿ, ಕಾಣಿಯೂರು, ಬೆಳ್ಳಾರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹತ್ತನೇ ಶಾಖೆ ವಿಟ್ಲದಲ್ಲಿ ಶುಭಾರಂಗೊಂಡಿದೆ.








