- Advertisement -
- Advertisement -


ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ 22ವರೆಗೆ ನಡೆಯಲಿದೆ.
ದಿನಾಂಕ: 21-1-2025ನೇ ಮಂಗಳವಾರ ಬೆಳಿಗ್ಗೆ 9:30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4:30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಗಲಿದೆ. ಬಳಿಕ ರಾತ್ರಿ 9:00ಕ್ಕೆ ಮಹಾರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.
ಸಂಜೆ 4:30ರಿಂದ ಮಕ್ಕಳ ತಂಡ ಉರಿಮಜಲು ಇವರಿಂದ “ಸ್ವರ ತರಂಗ” (ಸುಗಮ ಸಂಗೀತ) ಹಾಗೂ ಕು. ಸ್ವಿತಿ ಶೆಟ್ಟಿ ಇವರಿಂದ (ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇಶನದ ನೃತ್ಯ ಅಕಾಡೆಮಿ ಮಂಗಳೂರು) “ನೃತ್ಯಾರ್ಪಣಂ” ನಡೆಯಲಿದೆ. ರಥೋತ್ಸವ” ಬಳಿಕ ವಿಟ್ಲ ಸರಕಾರಿ ಮಾದರಿ ಶಾಲಾ ವಠಾರದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಷೋಷಿತ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ” ಬಂಟನ ಬಲಿ ಸುತ್ತು” ತುಳು ಕಥಾಭಾಗವನ್ನು ಬಯಲಾಟವಾಗಿ ಆಡಿತೋರಿಸಲಿದ್ದಾರೆ.
- Advertisement -








