Tuesday, April 23, 2024
spot_imgspot_img
spot_imgspot_img

ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಾವಧಿ ಜಾತ್ರೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ದಿನಾಂಕ 14/01/2021 ರಿಂದ 22/01/2021 ರವರೆಗೆ ನಡೆಯಲಿದೆ.

ದಿನಾಂಕ 14/01/2021ನೇ ಗುರುವಾರದಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ಒಂಭತ್ತು ದಿವಸಗಳ ಕಾಲ ಉತ್ಸವಾದಿಗಳು ಜರಗಲಿರುವುದು.

ದಿನಾಂಕ 14/01/2021ರ ಗುರುವಾರದಂದು ಲಕ್ಷದೀಪೋತ್ಸವ ನಡೆಯಲಿದೆ. ದಿನಾಂಕ 18/01/2021ರ ಸೋಮವಾರ ದಂದು ಬಯ್ಯದ ಬಲಿ ಉತ್ಸವ ನಡೆಯಲಿದೆ. ದಿನಾಂಕ 19/01/2021ರ ಮಂಗಳವಾರದಂದು ಕೆರೆ ಆಯನ ನಡೆಯಲಿದೆ. ದಿನಾಂಕ 20/02/2021 ನೇ ಬುಧವಾರ ದಂದು ಹೂ ತೇರು ನೆರವೇರಲಿದೆ. ದಿನಾಂಕ 21/01/2021ರ ಗುರುವಾರ “ಮಹಾರಥೋತ್ಸವ” ನಡೆಯಲಿದೆ.

ದಿನಾಂಕ 22/01/2021ನೇ ಶುಕ್ರವಾರದಂದು ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ ನಡೆಯಲಿದೆ. ದಿನಾಂಕ 26/01/2021 ನೇ ಮಂಗಳವಾರದಂದು ದೈವಗಳ ನೇಮೋತ್ಸವ ನಡೆಯಲಿದೆ. ದಿನಾಂಕ 27/01/2021ರ ಬುಧವಾರ ದಂದು ವಿಟ್ಲ ಅರಮನೆಯಲ್ಲಿ ದೈವಕ್ಕೆ ನೇಮ ನಡೆದ ಬಳಿಕ ಕೇಪುವಿಗೆ ಭಂಡಾರ ಹೊರಡಲಿದೆ.

ಕೋವಿಡ್19 ನಿಯಾಮವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನ ಆಡಳಿತ ಮಂಡಳಿ ಇಂದು ಸುದ್ಧಿಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ದಿನಾಂಕ 21/01/2021ರ ಗುರುವಾರ ಬೆಳಿಗ್ಗೆ ನಡೆಯುವ ದರ್ಶನ ಬಳಿ ಬಟ್ಟಲು ಕಾಣಿಕೆ ಹಾಗೂ ರಾತ್ರಿ “ಮಹಾರಥೋತ್ಸವ”ನೇರಪ್ರಸಾರ ಕಾರ್ಯಕ್ರಮವನ್ನು ನಿಮ್ಮ ನೆಚ್ಚಿನ ‘ವಿ ಟಿವಿ’ಯಲ್ಲಿ ವೀಕ್ಷಿಸಬಹುದು.

- Advertisement -

Related news

error: Content is protected !!