Friday, March 29, 2024
spot_imgspot_img
spot_imgspot_img

ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ- ಶ್ರೀ ಉಳ್ಳಾಲ್ತಿ ಮಲರಾಯ ಮೂಲ ಭಂಡಾರ ಚಾವಡಿ ಬೆಂಞಣ್ತಿಮಾರ್ ಗುತ್ತಿನಿಂದ ಭಂಡಾರ ಹೊರಡುವ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ : ಶ್ರೀ ಉಳ್ಳಾಲ್ತಿ ಮಲರಾಯ ಮೂಲ ಭಂಡಾರ ಚಾವಡಿ ಬೆಂಞಣ್ತಿಮಾರ್ ಗುತ್ತಿನಿಂದ ಕೆಲಿಂಜ ಶ್ರೀ ಅಮ್ಮನವರ ಸನ್ನಿಧಾನಕ್ಕೆ ಭಂಡಾರ ಹೊರಡುವ ಪ್ರಯುಕ್ತ ಬೆಂಞಣ್ತಿಮಾರ್ ಗುತ್ತು ಶ್ರೀ ಉಳ್ಳಾಲ್ತಿ ಮೂಲ ಸಾನಿಧ್ಯ ದಲ್ಲಿ ಫೆ.12 ರ ಶುಕ್ರವಾರದಂದು ರಾತ್ರಿ 8:45 ಕ್ಕೆ ಜಿಲ್ಲೆಯ ಹೆಸರಾಂತ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ” ಕದಂಬ ಕೌಶಿಕೆ ” ನಡೆದುಬರಲಿದೆ.

ಭಾಗವತರು : ಗಿರೀಶ್ ರೈ ಕಕ್ಕೆಪದವು, ಚೆಂಡೆ : ಪ್ರಕಾಶ್ ವಿಟ್ಲ, ಮದ್ದಳೆ : ರಾಮ್ ಪ್ರಸಾದ್ ವದ್ವ. ಅರ್ಥಧಾರಿಗಳು : ಹರೀಶ್ ಬಳಂತಿಮೊಗರು, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಸದಾಶಿವ ಆಳ್ವ ತಲಪಾಡಿ, ಪುಷ್ಪರಾಜ್ ಕುಕ್ಕಾಜೆ.

ಅಮ್ಮನವರ ಸಾನಿಧ್ಯದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ, ತಂಬಿಲ ಸೇವೆ, ಹೂವಿನ ಪೂಜೆ, ಕುಂಕುಮಾರ್ಚನೆ,ಕರ್ಪೂರಾರತಿ ಸೇವೆಗಳು ಹಾಗೂ ಭಜನಾ ಕಾರ್ಯಕ್ರಮಗಳು ನೇರವೇರಲಿದೆ. ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವತಿಯಿಂದ ರಾತ್ರಿ ಅನ್ನಸಂತರ್ಪಣೆ ಸೇವೆ ನಡೆಯಲಿದೆ.ಬೆಂಞಣ್ತಿಮಾರ್ ಗುತ್ತು ಗಿರಿಧರ್ ರೈ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!