- Advertisement -
- Advertisement -



ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ದಿನಾಂಕ ಫೆ.15 ಆದಿತ್ಯವಾರದಂದು ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ, ರಂಗಪೂಜೆ ಹಾಗೂ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ರಾತ್ರಿ ಗಂಟೆ 12ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನೋತ್ಸವ ನಡೆಯಲಿರುವುದು. ದಿನಾಂಕ ಫೆ. 16 ಸೋಮವಾರ ಪ್ರಾತಃ ಕಾಲ 5ಗಂಟೆಗೆ ಶ್ರೀ ದೇವರ ಉತ್ಸವ ಬಲಿ , ಕಟ್ಟೆ ಪೂಜೆ ಬಟ್ಟಲು ಕಾಣಿಕೆ ಜರಗಲಿರುವುದು.
ಫೆ 15 ಆದಿತ್ಯವಾರದಂದು ಹಿಂದೂ ಯುವಸೇನೆ ವಿಟ್ಲ ಅರ್ಪಿಸುವ ರಾತ್ರಿ ಗಂಟೆ 7.30ರಿಂದ ತುಡರ್ ಕಲಾವಿದೆರ್ ಕಲ್ಲಡ್ಕ ಅಭಿನಯದ ಕೊಪ್ಪರಿಗೆ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
- Advertisement -







