ವಿಟ್ಲ: ಮಕ್ಕಳಿಗೆ ಸಂಸ್ಕಾರ ನೀಡಬೇಕು. ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ದೇಶಕ್ಕೆ ಸಮಾಜಕ್ಕೆ ಸಾದ್ಯವಾದ ಕೊಡುಗೆ ನೀಡಬೇಕು. ಒಗ್ಗಟ್ಟಿನಲ್ಲಿ ಕೆಲಸಮಾಡಬೇಕು. ಎಂದು ಮಾಣಿಲ ಶ್ರೀಧಾಮ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು 13.12.2020ರಂದು ನಡೆದ ವಿಟ್ಲ ಕುಲಾಲ ಸಂಘದ 22ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕೋತ್ಸವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.
ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಕುಲಾಲ ಸಂಘದ ಅಧ್ಯಕ್ಷ ಬಿ. ಕೆ. ಬಾಬು, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರಮಾನಾಥ ವಿಟ್ಲ, ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಸುಚಿತ್ರ ರಮಾನಾಥ ಉಪಸ್ಥಿತರಿದ್ದರು.

ಶ್ರೀ ಸತ್ಯನಾರಾಯಣ ಪೂಜೆ ವಿಧಿವಿಧಾನಗಳನ್ನು ಉದಯೇಶ್ ಕೆದಿಲಾಯರು ನಡೆಸಿಕೊಟ್ಟರು. ಮೋಕ್ಷಿತ್, ಅಭಿಷೇಕ್, ಯಶಸ್ವಿ, ತ್ರಿಶಾಲಿ, ಸ್ವರ್ಣ ಅವರನ್ನು ಸಮ್ಮಾನಿಸಲಾಯಿತು. ಜತೆ ಕಾರ್ಯದರ್ಶಿ ಅರುಣಾಕರ ಪೆರ್ವಾಜೆ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ ಕುಲಾಲ್ ಪುಣಚ ಹಾಗೂ ಮಲ್ಲಿಕ ನಾರಾಯಣ ವರದಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಕುಲಾಲ್ ಪ್ರತಿಭಾನ್ವಿತರ ಮಾಹಿತಿ ನೀಡಿದರು. ಬಾಲಕೃಷ್ಣ ಮೆಣಸಿನಗಂಡಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿನೋದ್ ಕುಮಾರ್ ಎರುಂಬು ಸಹಕರಿಸಿದರು.










