Friday, May 3, 2024
spot_imgspot_img
spot_imgspot_img

ವಿಟ್ಲ: ಜಾಗದ ವಿಚಾರದಲ್ಲಿ ಗಲಾಟೆ..! ಸ್ವಂತ ಅಣ್ಣನನ್ನೇ ಕೊಂದ ತಮ್ಮ..!

- Advertisement -G L Acharya panikkar
- Advertisement -
vtv vitla

ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ತಮ್ಮ ತನ್ನ ಅಣ್ಣನನ್ನು ಕೊಲೆಗೈದಿದ್ದಾನೆ. ಈ ಘಟನೆ ವಿಟ್ಲದ ಮಂಗಿಲಪದವು ಬನಾರಿ ಎಂಬಲ್ಲಿ ನಡೆದಿದೆ.

ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಸಾವನ್ನಪ್ಪಿದ್ದು , ಪದ್ಮನಾಭ (49) ಕೊಲೆ ಮಾಡಿದ ಆರೋಪಿ. ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಗಲಾಟೆ ಕೊಲೆಯ ಮೂಲಕ ಅಂತ್ಯ ಕಂಡಿದೆ.

ಸಹೋದರಿಬ್ಬರು ಕುಡಿದು ಮನೆಯಲ್ಲಿ ಆಗಾಗ ಗಲಾಟೆ ನಡೆಸುತ್ತಿದ್ದರು. ಒಂದು ತಿಂಗಳ ಹಿಂದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಗಲಾಟೆ ನಡೆದಿದೆ ಎನ್ನ ಲಾಗಿದ್ದು , ಬುಧವಾರ ಕೊಲೆಯಾಗಿದ್ದ ಬಗ್ಗೆ ವಿಟ್ಲ ಠಾಣೆಗೆ ದೂರು ಬಂದಿದೆ.

astr
- Advertisement -

Related news

error: Content is protected !!